ಮೈಸೂರು: ಕೆಎಸ್‌ಆರ್‌ಟಿಸಿ ಬಸ್ ಅಡ್ಡಗಟ್ಟಿ ಪುಂಡಾಟ ಮೆರೆದ ಯುವಕನನ್ನು ಲಷ್ಕರ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕನಕಪುರ-ಮೈಸೂರು ಮಾರ್ಗವಾಗಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್, ಸ್ಕೂಟರ್‌ವೊಂದಕ್ಕೆ ಸರ್ಕಾರಿ ಅತಿಥಿಗೃಹದ ಬಳಿ ಡಿಕ್ಕಿ ಯಾಗಿದೆ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಸ್ಕೂಟರ್ ಸವಾರ, ಚಾಲಕ ಹಾಗೂ ನಿರ್ವಾಹಕನಿಗೆ ಥಳಿಸಿದ್ದಲ್ಲದೆ, ಬಸ್ ಅಡ್ಡಗಟ್ಟಿ ರಾದ್ದಾಂತ ಮಾಡಿದ್ದಾನೆ. ಸಂಚಾರ ದಟ್ಟಣೆ ಉಂಟಾಗಿದ್ದರಿಂದ ಮಧ್ಯೆ ಪ್ರವೇಶಿಸಿದ ಪೊಲೀಸರು, ಯುವಕನನ್ನು ವಶಕ್ಕೆ ಪಡೆದು ಚಾಲಕನನ್ನು ರಕ್ಷಿಸಿದ್ದಾರೆ.