ಜಿಲ್ಲೆ

ಬಸ್‌-ಕಾರು ಡಿಕ್ಕಿ,ನಾಲ್ವರು ಸಾವು

ಕಾರವಾರ: ಅಂಕೋಲಾ ಬಾಳೆಗುಳಿ ಸಮೀಪ ಭಾನುವಾರ ಮಧ್ಯಾಹ್ನ ಬಸ್‌ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ತದಡಿಯಿಂದ ಅಂಕೋಲಾ ಮೂಲಕ ಹುಬ್ಬಳ್ಳಿ, ನವಲಗುಂದಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ತಮಿಳುನಾಡು ಪಾಸಿಂಗ್‌ನ ಕಾರು ಡಿಕ್ಕಿಯಾಗಿದೆ. ಕಾರು ಗೋವಾದಿಂದ ತೆರಳುತ್ತಿತ್ತು. ನುಜ್ಜುಗುಜ್ಜಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಮೃತಪಟ್ಟಿದ್ದು, ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ. ಅಂಕೋಲಾ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಂಕೋಲಾ ಪಿಎಸ್‌ಐ ಪ್ರವೀಣಕುಮಾರ್‌ ಸ್ಥಳಕ್ಕೆ ಧಾವಿಸಿದ್ದಾರೆ.