ಶೇಡಬಾಳ ಬಸವೇಶ್ವರ ಪಿಕೆಪಿಎಸ್‌ಗೆ ಅಧ್ಯಕ್ಷೆಯಾಗಿ ಕವಿತಾ ನಾನಿಕರ, ಉಪಾಧ್ಯಕ್ಷರಾಗಿ ಅರುಣ ಶಿರದಾಡೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಶೋಭಾ ವಿಭೂತೆ, ಚಿದಾನಂದ ಸಾಂಗ್ಲಿ ಇತರರಿದ್ದರು. 
ಜಿಲ್ಲೆ

ಬಸವೇಶ್ವರ ಸಹಕಾರಿಗೆ ಕವಿತಾ ಅಧ್ಯಕ್ಷೆ

ಕಾಗವಾಡ: ತಾಲೂಕಿನ ಶೇಡಬಾಳ ಪಟ್ಟಣದ ಬಸವೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಶಾಸಕರಾದ ರಾಜು ಕಾಗೆ. ಲಕ್ಷ್ಮಣ ಸವದಿ ಬೆಂಬಲಿತರಾದ ಕವಿತಾ ನಾನಿಕರ ಅಧ್ಯಕ್ಷೆಯಾಗಿ, ಅರುಣ ಶಿರದಾಡೆ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

ಶೀತಲ ಹೇರ್ಲೆಕರ, ನಾರಾಯಣ ಕೆರೂರೆ, ಚಿದಾನಂದ ಮಾಳಿ, ಯಶವಂತ ಕುಂಬಾರ, ರಮೇಶ ರತ್ನಪ್ಪಗೋಳ, ಗುಂಡಪ್ಪ ಕೋಲೆ, ಕವಿತಾ ನಾನಿಕರ, ಶೋಭಾ ವಿಭೂತೆ, ರಮೇಶ ಬಾಡಕರ, ಅರುಣ ಶಿರದಾಡೆ, ಬಾಬಾಸಾಬ ಕಾಂಬಳೆ, ಶಂಕರ ಮಡ್ಡಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಕಾರಿಯಾಗಿ ಆರ್.ಎನ್.ನೂಲಿ ಕಾರ್ಯನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಹಣಾಕಾರಿ ಚಿದಾನಂದ ಸಾಂಗ್ಲಿ, ಅಶೋಕ ವಿಭೂತೆ, ಸಂಗೀತಾ ಹೊನವಾಡೆ, ಶೀತಲ ಪೋತದಾರ ಇತರರಿದ್ದರು.