ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ಹೈಯರ್ ಸೆಕೆಂಡರಿ ಸ್ಕೂಲನಲ್ಲಿ ವಿದ್ಯಾದೇವತೆ ಸರಸ್ವತಿಗೆ ಪೂಜೆ ಸಲ್ಲಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು. 
ಜಿಲ್ಲೆ

ಬಸವೇಶ್ವರ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ.

ಬಾಗಲಕೋಟೆ: ನಗರದ ಬಿವಿವಿ ಸಂಘದ ಬಸವೇಶ್ವರ ಹೈಯರ್ ಸೆಕೆಂಡರಿ ಸ್ಕೂಲನಲ್ಲಿ ವಿದ್ಯಾದೇವತೆ ಸರಸ್ವತಿಗೆ ಪೂಜೆ ಸಲ್ಲಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.

ಶುಕ್ರವಾರ ತಳಿರು ತೋರಣ ಕಟ್ಟಿ ತೆಂಗಿನ ಗರಿಯನಿಟ್ಟು ರಂಗೋಲಿ ಬಿಡಿಸಿ ಅಲಂಕಾರ ಮಾಡಲಾಗಿತ್ತು, ನಂತರ ವಿದ್ಯಾದೇವತೆ ಸರಸ್ವತಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಹೂ ನೀಡಿ, ಸಿಹಿ ಹಂಚಿ ಬರಮಾಡಿಕೊಳ್ಳುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಎಸ್.ಎಚ್.ಚಲವಾದಿ, ಶಿಕ್ಷಕರಾದ ಎನ್.ಬಿ.ಲೋಕರೆ, ಆರ್.ಜಿ.ಕಮ್ಮಾರ, ಎಂ.ಆರ್.ಕೋರೆ, ಆರ್.ಎಸ್.ದಡೆದ, ಆರ್.ಎಚ್.ಹಂಜಿ.ಎ.ಆರ್. ಹಿರೇಮಠ, ಬಿ.ಎಸ್ ಭಜಂತ್ರಿ, ಬಿ.ಜಿ. ದೆಸಾಯಿ, ಜೆ.ಆ.ಹಿರೇಮಠ, ಆರ್.ವಿ.ಮುದಿಯಪ್ಪನ್ನರಮಠ ಸೇರಿದಂತೆ ಇತರರು ಇದ್ದರು.