ಶಹಾಪುರ: ಜಿಲ್ಲೆಯ ವಾಣಿಜ್ಯ ನಗರಿಯೆಂದೆ ಖ್ಯಾತಿಯಾಗಿರುವ ರಾಜ್ಯ ಮತ್ತು ರಾಷ್ಟಿçÃಯ ಹೆದ್ದಾರಿ ರಸ್ತೆ ಹೊಂದಿರುವ ಶಹಾಪುರ ನಗರದಲ್ಲಿ ಸಂಚಾರದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಬಸವೇಶ್ವರ ವೃತ್ತ ನಗರದ ಹೃದಯ ಭಾಗ. ಯಾರು ಎಲ್ಲಿಗೆ ಹೋಗಬೇಕೆಂದರೂ ಮತ್ತು ಯಾವುದೇ ವಾಹನಗಳು ಸಹ ಬೇರೆ ಕಡೆ ಸಂಚರಿಸಬೇಕೆAದರೆ ಈ ವೃತ್ತದ ಮೂಲಕವೇ ಹಾದು ಹೋಗಬೇಕು.
ದಿನದ 24 ತಾಸು ಜನಜಂಗಳಿ ಮತ್ತು ವಾಹನ ಸಂಚಾರದಿAದ ಕೂಡಿದ ಸ್ಥಳವಾಗಿದೆ. ಬೆಳಗ್ಗೆ 10ರಿಂದ ರಾತ್ರಿ 11ರವರೆಗೆ ಸುಮಾರು 4ರಿಂದ 5 ಸಾವಿರ ವಾಹನಗಳು ಸಂಚರಿಸುವ ಬಹುದೊಡ್ಡ ಸರ್ಕಲ್ ಇದಾಗಿದೆ. ಬಸ್, ಲಾರಿ, ಬಲುಭಾರದ ವಾಹನಗಳು, ಜೀಪ್, ಕಾರ್ ಟ್ರಾÈಕ್ಟರ್, ಟಂಟA, ಕ್ರೂಸರ್‌ಗಳು ಮತ್ತು ದ್ವಿಚಕ್ರ ವಾಹನಗಳು ನಿರಂತರವಾಗಿ ಸಂಚರಿಸುತ್ತವೆ. ಇವುಗಳ ನಡುವೆ ಸಾವಿರಾರು ಜನರು ನಡೆದುಕೊಂಡು ಹೋಗುವ ಪ್ರಮುಖ ರಸ್ತೆ ಕೂಡ ಇದಾಗಿದೆ.
ಏಕಕಾಲಕ್ಕೆ ನೂರಾರು ವಾಹನಗಳು ಸಂಚಾರ ನಿಯಮ ಉಲ್ಲಂಘಿಸಿ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡರೆ ಇದು ಕ್ಲೀಯರ್ ಆಗಲು ಸುಮಾರು ಒಂದು ತಾಸು ಬೇಕು. ನಾಲ್ಕು ಪ್ರಮುಖ ದಾರಿಗಳಾದ ಯಾದಗಿರಿ, ಸುರಪುರ, ಸಿಂಧಗಿ ಮತ್ತು ಕಲಬುರಗಿ ಕಡೆಗೆ ಹೋಗುವ ಮತ್ತು ಮುಂದೆ ಬೇರೆ, ಬೇರೆ ರಾಜ್ಯಗಳಿಗೆ ತೆರಳುವ ಎಲ್ಲ ವಾಹನಗಳು ಇಲ್ಲಿಂದಲೇ ಪಾಸ್ ಆಗಬೇಕು.
ಪ್ರತಿನಿತ್ಯ ಏನಿಲ್ಲವೆಂದರೂ 7ರಿಂದ 8 ಸಲ ಟ್ರಾಫೀಕ್ ಜಾಮ್ ಆಗಿ ಜನರು ವಿಪರೀತ ಕಿರಿ, ಕಿರಿ ಅನುಭವಿಸುತ್ತಾರೆ. ಪೊಲೀಸರು ಇದ್ದಾಗ ಸುಗಮ ಸಂಚಾರವಷ್ಠೆ, ಅವರು ಇಲ್ಲದೆ ಹೋದರೆ ಎಲ್ಲರೂ ಒಮ್ಮಲ್ಲೇ ನುಗ್ಗಿ ಅಡ್ಡಾದಿಡ್ಡಿ ವಾಹನಗಳನ್ನು ತಂದು ನಡು ರಸ್ತೆಯಲ್ಲಿ ನಿಲ್ಲಿಸುತ್ತಾರೆ. ಇದು ನಿತ್ಯದ ನರಕಯಾತನೇ ಅನುಭವಿಸುವಂತಾಗಿದೆ. ಇದರಿಂದಾಗಿ ಶಾಲಾ ವಾಹನಗಳು ಸಮಯಕ್ಕೆ ತಲುಪಲು ಆಗುತ್ತಿಲ್ಲ. ಅನೇಕ ಸಲ ಅಪಘಾತಗಳು ಕೂಡ ಆದ ಘಟನೆ ನಡೆದಿವೆ.
ಈ ಸಮಸ್ಯೆಗೆ ಪರಿಹಾರ ಎಂದರೆ ಬೈಪಾಸ್ ರಸ್ತೆಯಾಗಬೇಕು. ಅಂದಾಗ ಮಾತ್ರ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ಏಕೆಂದರೆ ದೊಡ್ಡ ದೊಡ್ಡ ವಾಹನಗಳು ಬೈಪಾಸ್‌ನಿಂದ ಸಂಚರಿಸಿದಾಗ ಬಸವೇಶ್ವರ ವೃತ್ತ ಫ್ರೀಯಾಗುತ್ತದೆ. ಇದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಇಲ್ಲದಿದ್ದರೆ ನಿತ್ಯ ಈ ಹೈರಾಣ ತಪ್ಪಿದ್ದಲ್ಲ.