ಬಾಗಲಕೋಟೆ: ರಾಜ್ಯದ ಪ್ರತಿಷ್ಠಿತ ಬಸವೇಶ್ವರ ಸಹಕಾರಿ ಬ್ಯಾಂಕ ನಿ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಬ್ಯಾಂಕಿನ ೧೭ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣಾ ಅಽಕಾರಿ ದಾನಯ್ಯ ಹಿರೇಮಠ ಹಾಗೂ ಸಹಾಯಕ ಚುನಾವಣಾ ಅಽಕಾರಿ ಆರ್. ಎನ್ ಗಡ್ಡಿ ಘೋಷಿಸಿದ್ದಾರೆ.
ಬ್ಯಾಂಕಿನ ನೂತನ ನಿರ್ದೇಶಕರಾಗಿ ಸಾಮಾನ್ಯ ಮತಕ್ಷೇತ್ರದಿಂದ ಚಂದ್ರಶೇಖರಗೌಡ ತಮ್ಮನಗೌಡ ಪಾಟೀಲ, ಪ್ರಕಾಶ ಈಶ್ವರಪ್ಪ ತಪಶೆಟ್ಟಿ, ಮೋಹನ ಗುರಲಿಂಗಪ್ಪ ವಾಲಿ, ರವಿಕುಮಾರ ಯೋಗಪ್ಪ ಪಟ್ಟಣದ, ವೀರಪ್ಪ ವಿರುಪಾಕ್ಷಪ್ಪ ಶಿರಗಣ್ಣನ್ನವರ, ಶಂಕರ ಸಂಗಪ್ಪ ಅರಿಶಿನಗೋಡಿ, ಶಶಿಧರ ಶಿವಯೋಗಪ್ಪ ಜಿಗಳೂರ, ಶ್ರೀನಿವಾಸ ತಿಮ್ಮಯ್ಯ ಬಳ್ಳಾರಿ, ಶ್ರೀಶೈಲ ಚನ್ನಬಸಪ್ಪ ಆರಬ್ಬಿ, ಸಿದ್ದಪ್ಪ ಚಿನ್ನಪ್ಪ ಆಡಿನ, ಸುನೀಲ ಬಾಳಾಸಾಹೇಬ ಕಲಬುರ್ಗಿ, ಪರಿಶಿಷ್ಟ ಜಾತಿಯಿಂದ ಹೂವಪ್ಪ ಸೀತಪ್ಪ ರಾಥೋಡ, ಪರಿಶಿಷ್ಟ ಪಂಗಡದಿAದ ದುರ್ಗಪ್ಪ ತಿಮ್ಮನ್ನ ನಾಯಕ, ಹಿಂದುಳಿದ ಅ ವರ್ಗದಿಂದ ಶರಣಪ್ಪ ಸಂಗಪ್ಪ ಹೆರಕಲ್ಲ, ಹಿಂದುಳಿದ ಬ ವರ್ಗದಿಂದ ಶಂಕರಲಿAಗ ಮೋನಪ್ಪ ತಪಶೆಟ್ಟಿ, ಮಹಿಳಾ ಕ್ಷೇತ್ರದಿಂದ ಗೀತಾ ಸುಭಾಸಚಂದ್ರ ನಾರಾ, ಶೈಲಜಾ ಮಹಾಬಳೇಶ್ವರಯ್ಯ ಗುಡಗುಂಟಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.