ಚಿತ್ರದುರ್ಗ: ಅಂತರಂಗ,ಬಹಿರಂಗ ಶುದ್ಧವಾಗಿರಬೇಕು,ಅಂತರಂಗ ನಿರ್ಮಲವಾಗಿರಬೇಕಾದರೆ ದಾರ್ಶನಿಕರ ತತ್ವಾದರ್ಶಗಳ ಶ್ರವಣ,ಮನನ ಮ ತ್ತವುಗಳ ಅನುಸರಣೆಯಿಂದ ಸಾಧ್ಯವೆಂದು ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ಮುರುಘಾ ಮಠ ದದಿಂದ ಹೊಳಲ್ಕೆರೆ ತಾಲೂಕು ಕಡೂರು ವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಅನುಭಾವ ಶ್ರಾವಣದ ಅಂಗ ವಾಗಿ,ಮುರುಗಿ ಪರಂಪರೆಯ ಸಣ್ಣ ಗುರುಪಾದ ಮುರುಘರಾಜೇಂದ್ರ ಸ್ವಾಮೀಜಿ ಕುರಿತ ಚಿಂತನ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿ ದರು.
ಬಸವಾದಿ ಶರಣರ ವಚನಗಳ ಆಲಿಸುವುದು,ಓದುವುದು, ಮುರುಘಾ ಪರಂಪರೆಯ ಶ್ರೀಗಳ ಜೀವನ,ಆದರ್ಶ ಕಾರ್ಯಗಳನ್ನು ಅಧ್ಯಯನ ಮಾಡ ಬೇಕು. ಧ್ಯಾನ, ಬಸವಾದಿ ಶರಣರ ಆದರ್ಶಗಳ ಅಳವಡಿಕೆಯಿಂದ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರು.
ಮುರುಘಾಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ,ಶ್ರೀ ತಿಪ್ಪೇರುದ್ರಸ್ವಾಮಿಜಿ ಸಮ್ಮುಖ ವಹಿಸಿದ್ದರು. ದೇವಸ್ಥಾನ ಸಮಿತಿಯ ನಾಗ ರಾಜಪ್ಪ,ನಟರಾಜಪ್ಪ, ವೀರಭದ್ರಪ್ಪ, ಓಂಕಾರಪ್ಪ, ಪರಮೇಶ್ವರಪ್ಪ, ಈಶ್ವರಪ್ಪ, ಬಸವರಾಜಪ್ಪ ಪಟ್ಟಣಶೆಟ್ಟಿ, ಷಡಕ್ಷರಯ್ಯ ಇತರರು ಇದ್ದರು. ಪಿ.ಎಸ್.ಷಣ್ಮುಖಪ್ಪ ಅವರು ದಾಸೋಹ ಸೇವೆಯನ್ನು ವಹಿಸಿಕೊಂಡಿದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ದೇವಾಲಯ ಸಮಿತಿ ಉಪಾಧ್ಯಕ್ಷ ಎಚ್.ಎಂ.ದಯಾನಂದ್ ಸ್ವಾಗತಿಸಿ,ಉಪನ್ಯಾಸಕ ನಿಸಾ ರ್ ಅಹಮದ್ ವಂದಿಸಿದರು. ಉಪನ್ಯಾಸಕ ಕೆ.ಎಚ್.ಸಿದ್ದಲಿಂಗಪ್ಪ ನಿರೂಪಿಸಿದರು.ದೇವಾಲಯದ ಸಮೀಪ ಸಸಿಗಳನ್ನು ನೆಡಲಾಯಿ ತು. ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.