ಕೊಡೇಕಲ್: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗದಿದ್ದರೂ ಕೂಡ ಮಹಾರಾಷ್ಟçದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ನಾರಾಯಣಪುರ ಬಸವಸಾಗರ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿದೆ.
ಮಹಾರಾಷ್ಟçದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಲಾಲ್‌ಬಹಾದ್ದೂರ ಶಾಸ್ತಿçà ಜಲಾಶಯಕ್ಕೆ ಅಪಾರ ಪ್ರಮಾಣದ ಒಳ ಹರಿವು ಉಂಟಾಗಿ ಗುರುವಾರ ಬಸವಸಾಗರಕ್ಕೆ ಪ್ರಸಕ್ತ ಮುಂಗಾರಿನಲ್ಲಿ ಮೊದಲ ಬಾರಿಗೆ ೩೫೦೦ ಕ್ಯೂಸೆಕ್ ಪ್ರಮಾಣದ ನೀರು ಒಳಹರಿವು ಉಂಟಾಗಿದ್ದರಿAದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಕೃಷ್ಣಾ ನದಿ ಉಗಮಸ್ಥಾನ ಮಹಾಬಲೇಶ್ವರ ಸೇರಿ ದೂದಗಂಗಾ, ಪಶ್ಚಿಮ ಘಟ್ಟಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಪ್ರವಾಹ ಉಂಟಾಗಿ ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತಿçà ಜಲಾಶಯಕ್ಕೆ ಒಂದು ವಾರದಿಂದ ನಿರಂತರವಾಗಿ ಏರಿಕೆ ಕಂಡು ಬಂದಿದೆ.
೧೨೩ ಟಿಎಂಸಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಆಲಮಟ್ಟಿ ಜಲಾಶಯಕ್ಕೆ ೪೦ ಸಾವಿರ ಕ್ಯೂಸೆಕ್ ಒಳಹರಿವು ಉಂಟಾಗಿದೆ. ಗುರುವಾರ ಒಂದೇ ದಿನ ೮೦ ಟಿಎಂಸಿ ನೀರು ಸಂಗ್ರಹವಾಗಿದ್ದು ಇನ್ನೂ ಹೆಚ್ಚಿನ ಪ್ರಮಾಣದ ನೀರು ಬರುವ ಸಾಧ್ಯತೆ ಇರುವ ಕಾರಣ ನೀರಿನ ಸಂಗ್ರಹ ಮಟ್ಟ ಕಾಯ್ದಕೊಂಡು ೩೫೦೦ ಕ್ಯೂಸೆಕ್ ನೀರು ಬಸವಸಾಗರ ಜಲಾಶಯಕ್ಕೆ ಬಿಡಲಾಗಿದೆ.
ನೀರಿಲ್ಲದೆ ಭಣಗುಡುತ್ತಿದ್ದ ಜಲಾಶಯಕ್ಕೆ ಮಹಾರಾಷ್ಟç ನೀರಿನಿಂದ ಜೀವಕಳೆ ಬಂದಿದೆ. ೪೯೨.೨೫೨ ಮೀ ಗರಿಷ್ಠ ಮಟ್ಟ ಹೊಂದಿರುವ ಬಸವಸಾಗರ ಜಲಾಶಯ ೩೩.೩೧೩ ಟಿಎಂಸಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಗುರುವಾರ ನೀರಿನ ಮಟ್ಟ ೪೮೯.೨೦ ತಲುಪಿದ್ದು ೨೧.೧೬೭ ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ವೇಳೆ ಜಲಾಶಯದಲ್ಲಿ ಕೆವಲ ೧೪.೧೧೭ಟಿಎಂಸಿ ಮಾತ್ರ ನೀರಿನ ಸಂಗ್ರಹವಿತ್ತು. ಇದೇ ರೀತಿ ನೀರು ಬಂದಲ್ಲಿ ಜಲಾಶಯ ಭರ್ತಿಯಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.