ಜಿಲ್ಲೆ

ಬಸವಲಿಂಗ ಅವಧೂತರ ಜನ್ಮದಿನ

ಬೀದರ್: ನೆರೆಯ ತೆಲಂಗಾಣದ ಮಲ್ಲಯ್ಯಗಿರಿ ಆಶ್ರಮದಲ್ಲಿ ಜುಲೈ 3 ರಂದು 47 ಸಸಿಗಳನ್ನು ನೆಟ್ಟು ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರ 47ನೇ ಜನ್ಮದಿನ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಆಶ್ರಮದಲ್ಲಿ ಅಂದು ವಿವಿಧ ಬಗೆಯ ಸಸಿಗಳನ್ನು ನೆಡಲಾಗುವುದು. ಸಂಜೆ 6ಕ್ಕೆ ಭಕ್ತರು ರುದ್ರಾಕ್ಷಿಯಿಂದ ಶ್ರೀಗಳ ತುಲಾಭಾರ ಮಾಡಲಿದ್ದಾರೆ. ಆಧ್ಯಾತ್ಮಿಕ ಪ್ರವಚನ, ಸಂಗೀತ, ನೂತನವಾಗಿ ನಿರ್ಮಾಣಗೊಂಡ ಮುಖ್ಯ ವೇದಿಕೆ ಉದ್ಘಾಟನಾ ಸಮಾರಂಭ ಸಹ ಜರುಗಲಿದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.