ಬೀದರ್: ಬಸವರಾಜ ಧನ್ನೂರ ಅವರೇ ರಾಷ್ಟ್ರೀಯ ಬಸವ ದಳದ ಅಧಿಕೃತ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ನಾಂದೇಡಿನ ಅವಿನಾಶ ಭೋಸಿಕರ್ ಆಯ್ಕೆ ಅನಧಿಕೃತ. ಅದಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ರಾಷ್ಟ್ರೀಯ ಬಸವ ದಳದ ಸಭೆ ಪ್ರಕಟಿಸಿದೆ.
ಇಲ್ಲಿಯ ಬಸವ ಮಂಟಪದಲ್ಲಿ ಮಂಗಳವಾರ ಸಭೆ ನಡೆಯಿತು. ಬಸವ ದಳದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕೂಡಲಸಂಗಮ ಬಸವ ಧರ್ಮ ಪೀಠದ ಆದೇಶವೇ ಅಂತಿಮ. ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ಅವರು ಧನ್ನೂರ ಅವರೇ ಬಸವ ದಳದ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಪ್ರಕಟಿಸಿದ್ದಾರೆ. ಹೀಗಾಗಿ ಅಧ್ಯಕ್ಷರ ಪದಚ್ಯುತಿ ಅಥವಾ ಹೊಸ ಅಧ್ಯಕ್ಷರ ಆಯ್ಕೆ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.
ಯಾವುದೇ ಅಧಿಕಾರ ಇಲ್ಲದೆ ಕೆಲವರು ಸೇರಿ ಅವಿನಾಶ ಭೋಸಿಕರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿರುವುದು ಅನಧಿಕೃತ ಎಂದು ಘೋಷಿಸಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವ ದಳದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ ಅವರು, ಬಸವ ಧರ್ಮ ಪೀಠದ ಆದೇಶ ನಮಗೆಲ್ಲ ಸವರ್ೋಚ್ಛ. ಅದನ್ನು ಚಾಚೂತಪ್ಪದೇ ಪಾಲಿಸಲಿದ್ದೇವೆ. ಬಸವ ಮಂಟಪದಲ್ಲಿ ಪ್ರತಿ ಭಾನುವಾರದ ಪ್ರಾರ್ಥನೆ, ಬಸವ ಜ್ಯೋತಿ, ಶರಣ ಸಂಗಮ ಕಾರ್ಯಕ್ರಮ ಬಸವ ದಳದ ಜಿಲ್ಲಾ ಘಟಕದ ಮುಂದಾಳತ್ವದಲ್ಲೇ ನಡೆಯಲಿವೆ ಎಂದರು.
ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ್ ಖಾಜಾಪೂರ, ರಾಜ್ಯ ಘಟಕ ಉಪಾಧ್ಯಕ್ಷ ರಾಜೇಂದ್ರ ಜೊನ್ನಿಕೇರಿ ಮಾತನಾಡಿದರು. ಈ ವೇಳೆ ಬಸವರಾಜ ಧನ್ನೂರ ಹಾಗೂ ಬಸವ ದಳ ಪ್ರಧಾನ ಕಾರ್ಯದಶರ್ಿ ರಾಜೇಂದ್ರಕುಮಾರ ಗಂದಗೆ ಅವರನ್ನು ಸನ್ಮಾನಿಸಲಾಯಿತು.
ಬಸವ ದಳದ ಜಿಲ್ಲಾ ಘಟಕದ ಪ್ರಧಾನ ಕಾರ್ಯದಶರ್ಿ ಸುರೇಶಕುಮಾರ ಸ್ವಾಮಿ, ಮುಖಂಡರಾದ ಸಂಜುಕುಮಾರ ಪಾಟೀಲ್, ಹುಡಗೆ ಗುಂಡಪ್ಪ, ಸಂಜೀವಕುಮಾರ ಪಾಟೀಲ್ ಚೊಂಡಿ, ಜಗನ್ನಾಥಯ್ಯ ಸ್ವಾಮಿ ಚಟ್ನಳ್ಳಿ, ರಾಜಶೇಖರ ಮಂಗಲಗಿ, ಶಂಭುಲಿಂಗಯ್ಯ ಸ್ವಾಮಿ ಕವಡಿಮಠ, ಕಾಶಪ್ಪ ಸೀತಾ, ಅಶೋಕ ಶೀಲವಂತ, ವೀರಭದ್ರಪ್ಪ ಬುಯ್ಯಾ, ಸಿದ್ರಾಮ ಶೆಟಕಾರ್, ವಿಶ್ವನಾಥ ಉದಗಿರೆ, ವಿಶಾಲ್ ಪಾಟೀಲ್, ಆನಂದ ಪಾಟೀಲ್, ರಾಜಕುಮಾರ ಪಾಟೀಲ್ ಕನ್ನಳ್ಳಿ, ರಮೇಶಕುಮಾರ ಪಾಟೀಲ್, ಗಣಪತಿ ಬಿರಾದಾರ, ನಿರಂಕಾರ ತುಪ್ಪದ, ಬಸವರಾಜ ಚನಶೆಟ್ಟಿ, ರವಿ ಪಾಪಡೆ, ಮಹಾಲಿಂಗ ಸ್ವಾಮಿ ಚಟ್ನಳ್ಳಿ ಇತರರಿದ್ದರು.