ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದಲ್ಲಿ ಅಭಿನವ ಸಂಗನಬಸವ ಶ್ರೀಗಳ ನೇತೃತ್ವದಲ್ಲಿ ನೂರಾರು ಸುಮಂಗಲೆಯರು ಮಠದ ಗೋಮಾತೆಗೆ ಸೀಮಂತ ನೆರವೇರಿಸಿದರು. ಅಭಿನವ ಸಂಗನಬಸವ ಶ್ರೀಗಳು ಇದ್ದರು. 
ಜಿಲ್ಲೆ

ಮನಗೂಳಿ ಹಿರೇಮಠದಲ್ಲಿ ಗೋಮಾತೆಗೆ ಸೀಮಂತ

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಹಿರೇಮಠದಲ್ಲಿ ಗೋಮಾತಗೆ ಬುಧವಾರ ಸೀಮಂತ ಕಾರ್ಯವನ್ನು ವಿಶೇಷವಾಗಿ ನೆರವೇರಿಸಲಾಯಿತು.

ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳ ನೇತೃತ್ವದಲ್ಲಿ ನೂರಾರು ಸುಮಂಗಲೆಯರು ಶ್ರೀಮಠದ ಗೋಮಾತೆಗೆ ಸೀಮಂತ ಮಾಡಿದರು. ಹೆಣ್ಣಿಗೆ ಮದುವೆ ಮತ್ತು ಸೀಮಂತ ಜೀವನದಲ್ಲಿ ಅತ್ಯಂತ ಪ್ರಮುಖವಾದ ಘಟ್ಟ. ತನ್ನ ಜೀವನದ ಉದ್ದಕ್ಕೂ ಮರೆಯಲಾರದ ಕಾರ್ಯಕ್ರಮ ಸೀಮಂತ. ಹೀಗಾಗಿ ಹಿರಿಯರೆಲ್ಲರೂ ಸೇರಿ ತಮ್ಮ ಬಂಧು-ಬಳಗದೊಂದಿಗೆ ಮನೆ ಮಗಳಿಗೆ ಸೀಮಂತ ಕಾರ್ಯಕ್ರಮ ಮಾಡುವ ಕಾರ್ಯ ಅನಾದಿಕಾಲದಿಂದಲೂ ರೂಢಿಯಲ್ಲಿದ್ದು, ಇಂದಿನವರೆಗೂ ನಡೆಯುತ್ತಾ ಬಂದಿದೆ.

ಅನ್ನದಾತ ಭೂತಾಯಿ ಮಡಿಲಿಗೆ ಬೀಜ ಹಾಕುವ ಮುನ್ನ ಹಾಗೂ ರಾಶಿ ಮಾಡುವಾಗ ಪೂಜೆ ನೆರವೇರಿಸುತ್ತಾನೆ. ಶ್ರೀಮಠದಲ್ಲಿ ಜರುಗಿದ ಗೋವಿನ ಸೀಮಂತ ಕಾರ್ಯಕ್ರಮವು ವಿಶಿಷ್ಠವಾಗಿತ್ತು. ಈ ಕಾರ್ಯಕ್ರಮದ ಮೂಲಕ ಹೊಸ ಸಂಪ್ರದಾಯಕ್ಕೆ ಮಠವು ಕಾಲಿಟ್ಟಿದ್ದು ಇತರರಿಗೂ ಮಾದರಿಯ ಕಾರ್ಯಕ್ರಮವಾಗಿ ಹೊರಹೊಮ್ಮಿದೆ.

ಸೀಮಂತ ಕಾರ್ಯಕ್ರಮದಲ್ಲಿ ಹತ್ತಾರು ಬಗೆಯ ತಿಂಡಿ, ತಿನಿಸುಗಳು, ಸಜ್ಜಿರೊಟ್ಟಿ, ಶೇಂಗಾ ಹೋಳಿಗೆ, ಹತ್ತಾರು ತರದ ಪಲ್ಲೆಗಳನ್ನು ತಯಾರಿಸಿ ಗೋಮಾತೆಗೆ ತಿನ್ನಿಸಲಾಯಿತು.

ಸೀಮಂತ ಕಾರ್ಯಕ್ರಮದಲ್ಲಿ ಮಾದೇವಿ ಉಪ್ಪಾರ, ಪವಿತ್ರಾ ಗೊರಪಡೆ, ರಾಧಾ ಮನಗೂಳಿ, ಮಾದೇವಿ ಅರುಡಕಿ, ನೀಲಮ್ಮ ಬಬಲೇಶ್ವರ, ರೇಣುಕಾ ಮಣ್ಣೂರ, ಜ್ಯೋತಿ ಹಿಟ್ನಳ್ಳಿ, ಬೋರಮ್ಮ ಪಾಟೀಲ, ವಾಣಿ ನುಚ್ಚಿ, ಭಾಗಮ್ಮ ಕೊಳೂರ, ಸಂಕರಮ್ಮ ಬಿರಾದಾರ, ರೇಣುಕಾ ಬನಸೊಡೆ, ವೀಣಾ ಕವಟೆಕರ ಇತರರಿದ್ದರು.

ಹೆಣ್ಣಿನ ಜೀವನದಲ್ಲಿ ಮದುವೆ ಹಾಗೂ ಸೀಮಂತ ಎರಡು ಪ್ರಮುಖ ಘಟ್ಟಗಳು. ಹೀಗಾಗಿ ಶ್ರೀಮಠದ ಗೋಮಾತೆಗೆ ಸೀಮಂತ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸಲಾಗಿದೆ.
ಅಭಿನವ ಸಂಗನಬಸವ ಶ್ರೀಗಳು, ಮನಗೂಳಿ ಹಿರೇಮಠ