ಬಸವಕಲ್ಯಾಣ: ಬಸವತತ್ವದ ಬಗ್ಗೆ ಅಗಾದವಾದ ತುಡಿತವಿದ್ದ ಶಾಸಕ ಬಿ.ನಾರಾಯಣರಾವ ಅವರು ಸಮಾಜದ ಬಗ್ಗೆ ಕಳಕಳಿ ಇರುವ ಒಬ್ಬ ಪ್ರಾಮಾಣಿಕ ರಾಜಕಾರಣಿಯಷ್ಟೇ ಅಲ್ಲ ಅಪ್ಪಟ ಬಸವತತ್ವ ಪರಿಪಾಲಕರಾಗಿದ್ದರು ಎಂದು ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಹೇಳಿದರು.
ನಗರದ ಬಸವ ವೃತ್ತದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಶಾಸಕ ಬಿ.ನಾರಾಯಣರಾವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಅವರ ಅಗಲಿಕೆ ಕ್ಷೇತ್ರ ಮತ್ತು ನಾಡಿಗೆ ತುಂಬದ ನಷ್ಟ ಎಂದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, ನಾರಾಯಣರಾವ್ ಅವರೊಂದಿಗಿನ 20 ವರ್ಷಗಳ ಸಂಬಂಧವನ್ನು ಸ್ಮರಿಸಿ ಭಾವುಕರಾದರು. ಪಕ್ಷಾತೀತವಾಗಿ ರಾಜ್ಯಮಟ್ಟದಲ್ಲಿ ಎಲ್ಲ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದ್ದಿದ್ದರು. ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದರೂ, ಒಂದೇ ಒಂದು ದಿನ ಮನಸ್ತಾಪ ನಮ್ಮಿಬ್ಬರಲಿ ಇರಲಿಲ್ಲ. ನನಗೆ ಮಾರ್ಗದರ್ಶಕರಾಗಿ, ಹಿರಿಯಣ್ಣನಂತೆ ಇದ್ದರು ಎಂದು ಸ್ಮರಿಸಿದರು.
ಭಾಲ್ಕಿಯ ಶ್ರೀಗುರುಬಸವ ಪಟ್ಟದ್ದೇವರು ಮಾತನಾಡಿ, ಅವರಲ್ಲಿ ಬಸವ ತತ್ವದ ಬಗ್ಗೆ ಇದ್ದ ಕಾಳಜಿ ಮತ್ತು ಕಲ್ಯಾಣ ನಾಡನ್ನು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕನ್ನುವ ತುಡಿತ ಎಲ್ಲ ನಾಯಕರಿಗೆ ಮಾದರಿ ಎಂದರು.
ಯುವ ಮುಖಂಡ ಶಿವಕುಮಾರ ಬಿರಾದಾರ ಮಾತನಾಡಿ, ನಾರಾಯಣರಾವ್ ಹೋರಾಟಮಯ ಬದುಕು. ರಾಜಕೀಯ ಹಿನ್ನಲೆ ಇಲ್ಲದ ಕುಟುಂಬದಲ್ಲಿ ಜನಿಸಿ ಬೂತ ಮಟ್ಟದಿಂದ 40 ವರ್ಷದ ಸಂಘರ್ಷದ ಮೂಲಕ ಸಾಮಾಜಿಕ ಕ್ರಾಂತಿಯ ನೆಲದಲ್ಲಿ ಶಾಸಕರಾಗಿದ್ದು ಐತಿಹಾಸಿಕ ಎಂದರು.
ಕಾಂಗ್ರೆಸ್ ಮುಖಂಡರಾದ ಬಸವರಾಜ ಸ್ವಾಮಿ, ಮನೋಜ ಮಾಶೆಟ್ಟೆ, ಶರಣು ಆಲಗೂಡ, ನಗರಸಭೆ ಮಾಜಿ ಸದಸ್ಯ ರವೀಂದ್ರ ಕೋಳಕೂರ, ಶಶೀಧರ ಕೋಸಂಬೆ ಮಾತನಾಡಿದರು. ನಾರಾಯಣರಾವ ಅವರ ಪುತ್ರ ರಾಹುಲ್, ಬಿಡಿಪಿಸಿ ಅಧ್ಯಕ್ಷ ಅನಿಲಕುಮಾರ ರಗಟೆ, ಕೋಶಾಧ್ಯಕ್ಷ ಸುಭಾಷ ಹೋಳಕುಂದೆ, ಸಹ ಕಾರ್ಯದರ್ಶಿ ಬಸವರಾಜ ಬಾಲಕೀಲೆ, ಡಾ.ಜಿಎಸ್. ಭುರಳೆ, ಜಿಪಂ ಮಾಜಿ ಸದಸ್ಯ ಸಂಜುಕಾಳೇಕರ್, ಶಶಿಕಾಂತ ದುರ್ಗೆ, ಜಗನ್ನಾಥ ಖೂಬಾ, ಮುಖಂಡರಾದ ಬಾಬುಹೊನ್ನಾನಾಯಕ, ನಗರಸಭೆ ಸದಸ್ಯ ರವೀಂದ್ರ ಬೋರಾಳೆ, ದೀಪಕ ಗುಡ್ಡಾ, ರಾಮ ಜಾಧವ್, ತಹಸೀನಲಿ ಜಮಾದಾರ, ಎಸ್ಪಿ ಬಿರಾದಾರ, ಬಿಜೆಪಿ ಮುಖಂಡ ಪ್ರದೀಪ ವಾತಾಡೆ, ಬಸವರಾಜ ಕೊರಕೆ, ಸಂದೀಪ, ಶಿವಕುಮಾರ ಜಿಡಗೆ, ಮಹೇಶ ಸುಂಟನೂರೆ, ಗಿರೀಷ ತಾಂಬೋಳೆ, ಸಂಜು ಮೇಟಗೆ, ಕಿರಣ, ಜಗನ್ನಾಥ ಪಾಟೀಲ್, ಶರಣು ಆಲಗೂಡ ಇತರರಿದ್ದರು.