ಔರಾದ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಿಂಗಳ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರ ದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಧನರಾಜ ರಾಗಾ, ಡಾ.ಗಾಯತ್ರಿ, ಜಗನಾಥ ಮೀಸೆ, ಡಾ.ಸಂಜೀವಕುಮಾರ ಜುಮ್ಮಾ, ಧನರಾಜ ಕೋಣೆ, ರತಿಕಾಂತ ಖರಜಿಗೆ, ಅಂಕುಶ ದೇಶಮುಖ, ಪವನಕುಮಾರ ಕೋಣೆ ಇತರರಿದ್ದರು. 
ಜಿಲ್ಲೆ

ಬಸವಣ್ಣನವರ ಸಂದೇಶ ವಿಶ್ವಕ್ಕೆ ಮಾದರಿ

ಔರಾದ್: ಬಸವಣ್ಣನವರ ಸಂದೇಶಗಳು ವಿಶ್ವಕ್ಕೆ ಮಾದರಿಯಾಗಿವೆ. ೧೨ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾಜವನ್ನು ತಿದ್ದಿದ ಬಸವಣ್ಣನವರು ಅನುಭನ ಮಂಟಪ ನಿರ್ಮಿಸಿ ಸಮಾನತೆಯನ್ನು ಸಾರಿದರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಅನುಭವ ಮಂಟಪದಲ್ಲಿ ಭಾರತೀಯ ಬಸವ ಬಳಗ ಸಹಯೋಗದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ೧೩ನೇ ತಿಂಗಳ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಮಾಜವನ್ನು ಸಮಾನತೆಯ ಆಧಾರದಲ್ಲಿ ಕಟ್ಟಿದವರು ಬಸವಣ್ಣ. ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿ ನವೀನ ಕ್ರಾಂತಿ ಮೂಡಿಸಿದವರು. ಒಬ್ಬ ನೈಜ ಸಮಾಜ ಸುಧಾರಕರಾಗಿದ್ದ ಬಸವಣ್ಣರ ಚಿಂತನೆ ಇಂದು ವಿಶ್ವದಾದ್ಯಂತ ವ್ಯಾಪಿಸಿದೆ ಎಂದು ಹೇಳಿದರು.

ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡಿ, ಪಟ್ಟಣದಲ್ಲಿ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ. ಇಲ್ಲಿಯ ಮಣ್ಣಿನಲ್ಲಿ ಅದ್ಭುತ ಶಕ್ತಿಯಿದೆ ಎಂದು ಕ್ಷೇತ್ರದ ಬಗ್ಗೆ ಕೊಂಡಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಬಸವ ಸಮಿತಿ ಅಧ್ಯಕ್ಷ ಧನರಾಜ ರಾಗಾ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಜಗನ್ನಾಥ ಮೀಸೆ ಅನುಭಾವ ನುಡಿ ನುಡಿದರು.

ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ, ಧನರಾಜ ಕೋಣೆ, ರತಿಕಾಂತ ಖರಜಿಗೆ, ಅಂಕುಶ ದೇಶಮುಖ, ಪವನಕುಮಾರ ಕೋಣೆ, ಶಿವಕುಮಾರ ಘಾಟೆ, ಸಂಗಪ್ಪ ಘಾಟೆ ಇತರರಿದ್ದರು.

ನಾಗಮ್ಮ ಸಂಗಪ್ಪ ಘಾಟೆ ದಂಪತಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ವಿಜಯಲಕ್ಷ್ಮೀ ಶಿವಕುಮಾರ ಘಾಟೆ ದಂಪತಿ ಬಸವಪೂಜೆ ಸಲ್ಲಿಸಿದರು. ಜಗನ್ನಾಥ ಮೂಲಗೆ ಸ್ವಾಗತಿಸಿದರು. ಶರಣಪ್ಪ ನಾಗಲಗಿ ನಿರೂಪಣೆ ಮಾಡಿದರು. ಸಂತೋಷ ಘಾಟೆ ವಂದಿಸಿದರು. ಎಕಲಾರ ಶಾಲೆಯ ಮಕ್ಕಳಿಂದ ವಚನ ನೃತ್ಯ ನಡೆಯಿತು.

ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗುಲ್ಬರ್ಗ ವಿವಿಯ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ, ಪಪಂ ಅಧ್ಯಕ್ಷೆ ಸರುಬಾಯಿ ಘೂಳೆ, ಯುವರತ್ನ ಪ್ರಶಸ್ತಿ ಪುರಸ್ಕೃತ ಸಂಗಮೇಶ ಜ್ಯಾಂತೆ, ಜಂಬಗಿ ಗ್ರಾಪಂ ಅಧ್ಯಕ್ಷೆ ಸುಮನಬಾಯಿ ಪಾಟೀಲ್, ಪಿಡಿಒ ಶರಣಪ್ಪ ಗಾದಗೆ ಅವರನ್ನು ಸತ್ಕರಿಸಲಾಯಿತು.

ದಾಸೋಹಿಗಳಿಗೆ ಸತ್ಕಾರ: ತಿಂಗಳ ಮನೆಗೊಂದು ಅನುಭವ ಮಂಟಪದಲ್ಲಿ ದಾಸೋಹ ವ್ಯವಸ್ಥೆ ಮಾಡಿರುವ ಧನರಾಜ ರಾಗಾ, ಸುಭಾಷ ಸಿರಂಜೆ, ಶರಣಪ್ಪ ಚಿಟಮೇ, ನಾಗನಾಥ ಚಿಟಮೇ, ಮಹಾದೇವ ಘೂಳೆ, ಅಂಬಾದಾಸ ನೇಳಗೆ, ಅಡವೆಪ್ಪ ಪಟ್ನೆ, ರಮೇಶ ದಾಡಗಿ, ಸಂಜು ಶೆಟಕಾರ, ರೇವಣಪ್ಪ ಎಡವೆ ಅವರನ್ನು ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಸತ್ಕರಿಸಿದರು.

ಅನುಭವ ಮಂಟಪದಲ್ಲಿ ೧೨ನೇ ಶತಮಾನದಲ್ಲಿಯೇ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮುದ್ರೆ ಬಿದ್ದಿದೆ. ಇನ್ನೂ ಸರ್ಕಾರದಿಂದ ಸ್ವತಂತ್ರ ಧರ್ಮದ ಮುದ್ರೆ ಬೀಳಬೇಕಿದೆ.

| ನಾಡೋಜ ಶೀ ಡಾ.ಬಸವಲಿಂಗ ಪಟ್ಟದ್ದೇವರು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರು