ಭಾಲ್ಕಿಯ ಚನ್ನಬಸವಾಶ್ರಮ ಪರಿಸರದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಉತ್ಸವ ಕಾರ್ಯಕ್ರಮ ನ್ಯಾಯಾಧೀಶ ಪ್ರಭು ಎನ್ ಬಡಿಗೇರ ಉದ್ಘಾಟಿಸಿದರು. ಶ್ರೀ ಗುರುಬಸವ ಪಟ್ಟದ್ದೇವರು, ಶರಣಪ್ಪ ಮಿಠಾರೆ, ಬಸವರಾಜ ಮರೆ, ಸೋಮನಾಥಪ್ಪ ಅಷ್ಟೂರೆ ಇತರರಿದ್ದರು. 
ಜಿಲ್ಲೆ

ಬಸವಣ್ಣನವರ ವಿಚಾರಧಾರೆ ಸಾರ್ವಕಾಲಿಕ

ಭಾಲ್ಕಿ: ವಿಶ್ವಗುರು ಬಸವಣ್ಣನವರು ಮಹಾನ್ ದಾರ್ಶನಿಕರಾಗಿದ್ದಾರೆ. ಅವರ ವಿಚಾರಧಾರೆ ಸಾರ್ವಕಾಲಕ್ಕೂ ಶ್ರೇಷ್ಠವಾಗಿವೆ ಎಂದು ಬೀದರ್ ನ ಹಿರಿಯ ಶ್ರೇಣಿ ನ್ಯಾಯಾಧೀಶ ಪ್ರಭು ಎನ್.ಬಡಿಗೇರ್ ಹೇಳಿದರು.

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಬಸವ ಜಯಂತಿ ಉತ್ಸವ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರ ಒಂದೊಂದು ವಚನಗಳು ಅರ್ಥಗರ್ಭಿತ ಆಗಿವೆ. ಬಸವಣ್ಣನವರ ವಚನಗಳು ನಿಜ ಜೀವನದಲ್ಲಿ ಆಚರಣೆಗೆ ಬದುಕು ಸುಂದರವಾಗಿ ರೂಪಗೊಳ್ಳಲಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವಣ್ಣನವರು ಜಾತಿಬೇಧ ಎನ್ನದೇ ಎಲ್ಲರನ್ನು ಅಪ್ಪಿಕೊಂಡಿದ್ದರು. ಸಮಾನತೆ, ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದರು. ಭಾರತ ದೇಶ ಶರಣರು, ಮಹಾತ್ಮರು ನಡೆದಾಡಿದ ಭೂಮಿಯಾಗಿದೆ. ತನ್ನದೇ ಮೌಲ್ಯ, ಭವ್ಯ ಪರಂಪರೆ ಹೊಂದಿದೆ. ಆದರೆ ಇಂತಹ ನೆಲದಲ್ಲಿ ಮೌಢ್ಯತೆ ಮುಂದೆವರೆದಿರುವುದು ಆತಂಕ ತರಿಸಿದೆ. ಇವುಗಳಿಂದ ಹೊರಬರಲು ಬಸವಾದಿ ಶರಣರ ತತ್ವಗಳಿಗೆ ಮೊರೆ ಹೋಗಬೇಕು ಎಂದು ತಿಳಿಸಿದರು.

ಉದ್ಯಮಿ ಸೋಮನಾಥಪ್ಪ ಅಷ್ಟೂರೆ ಬಸವ ಗುರುವಿನ ಪೂಜೆ ನೆರವೇರಿಸಿದರು. ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಬಸವರಾಜ ಮರೆ ಧರ್ಮಗ್ರಂಥ ಪಠಿಸಿದರು. ಬೀದರ್ ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ ಅನುಭಾವ ನೀಡಿದರು ದೀಪಕ ಠಮಕೆ ನಿರೂಪಣೆ ಮಾಡಿ ವಂದಿಸಿದರು.

ಕೇಂದ್ರ ಸರ್ಕಾರ ಮೊದಲ ಬಾರಿಗೆ ಸಂಸತ್ತಿನಲ್ಲಿ ಬಸವಣ್ಣನವರ ಜಯಂತಿ ಆಚರಿಲು ನಿರ್ಧಾರ ಕೈಗೊಂಡಿರುವುದು ಸಂತಸ ತರಿಸಿದೆ.

ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಬಸವಣ್ಣನವರ ಜಯಂತಿ ಕೇಂದ್ರದಿಂದ ಆಚರಿಸುವಂತೆ ನಿರಂತರ ಒತ್ತಡ ತಂದಿದ್ದರು.

| ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ