ಜಿಲ್ಲೆ

ಬಸವಣ್ಣನವರ ವಚನಗಳನ್ನು ಪಾಲಿಸಿದರೆ ಜೀವನ ಸಾರ್ಥಕ

ಕೊಳ್ಳೇಗಾಲ: ಪಟ್ಟಣದ ಮಠದ ಬೀದಿಯ ಶ್ರೀಮಹದೇಶ್ವರ ಐಟಿಐ ಕಾಲೇಜಿನಲ್ಲಿ ಮಂಗಳವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ವತಿಯಿಂದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 109ನೇ ಜಯಂತಿ ಕಾರ್ಯಕ್ರಮ ಹಾಗೂ ನಿವೃತ್ತ ಪ್ರಾಂಶುಪಾಲ ಶರಣ ವೀರಭದ್ರಸ್ವಾಮಿ ಅವರ ದತ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ ಮಾತನಾಡಿ, ಜಗಜ್ಯೋತಿ ಬಸವಣ್ಣ ಅವರು ಹಾಕಿಕೊಟ್ಟ ಮಾರ್ಗವೇ ಸಂವಿಧಾನ ಆಶಯಗಳಾಗಿದೆ. ಜಗತ್ತಿಗೆ ವಚನ ಚಳವಳಿಯ ಬಗ್ಗೆ ಅರ್ಥಗರ್ಭಿತವಾಗಿ ಉಪದೇಶ ನೀಡಿದ ಮಹಾನ್ ಸಂತ ಬಸವಣ್ಣರಾಗಿದ್ದಾರೆ. ಅವರ ಆದರ್ಶ ಮತ್ತು ವಚನಗಳನ್ನು ವಿದ್ಯಾರ್ಥಿಗಳು ಪಾಲಿಸಿದರೆ ಜೀವನದಲ್ಲಿ ಸಾರ್ಥಕತೆ ಸಾಧಿಸಿಕೊಳ್ಳಬಹುದಾಗಿದೆ ಎಂದರು.

ಜಗದ್ಗುರು ಶ್ರೀರಾಜೇಂದ್ರ ಸ್ವಾಮೀಜಿ ವಿದ್ಯಾ ಮತ್ತು ಅನ್ನದಾನ ಕ್ರಾಂತಿಯನ್ನೇ ಮಾಡಿದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕಿನ ದಾರಿ ತೋರಿಸಿದರು ಎಂದರು.

ಶ್ರೀಮಹದೇಶ್ವರ ಐಟಿಐ ಕಾಲೇಜಿನ ಪ್ರಾಂಶುಪಾಲ ಎಂ.ಮಹೇಶ್ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶಿವಕುಮಾರ್, ಉಪನ್ಯಾಸಕ ಪಾಲಾಕ್ಷ, ಎಂ.ರಾಜೇಶ್ ಹಾಗೂ ವಿದ್ಯಾರ್ಥಿಗಳಿದ್ದರು.