ಕಲಬುರಗಿ: ರಂಗಾಯಣ ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಜ.೧೫ರಿಂದ ೧೭ರ ವರೆಗೆ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಬಸವಣ್ಣನವರ ಕುರಿತು ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ವಿಶ್ವರಾಜ ಪಾಟೀಲ್ ಹೇಳಿದರು.
ಜ.15ರ ಸಂಜೆ 6ಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಸಿಎಂ ಸಲಹೆಗಾರ ಬಿ.ಆರ್.ಪಾಟೀಲ್, ಅಧ್ಯಕ್ಷರಾಗಿ ಶಾಸಕ ಅಲ್ಲಮಪ್ರಭು ಪಾಟೀಲ್, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ, ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ನಾಟಕಕಾರ ಮಹಾಂತೇಶ ನವಲಕಲ್ ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.೧೭ರ ಸಂಜೆ ೬ಕ್ಕೆ ಸಮಾರೋಪ ನಡೆಯಲಿದ್ದು, ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎಲ್.ಶೇಖ್, ರಂಗ ಸಂಘಟಕ ಕೆ.ಲಿಂಗಪ್ಪ, ಸುಜಾತಾ ಜಂಗಮಶೆಟ್ಟಿ ಹಾಗೂ ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ ಪಾಲ್ಗೊಳ್ಳಲಿದ್ದಾರೆ ಎಂದರು.
ಮೂರು ನಾಟಕ: ಜ.೧೫ರ ಸಂಜೆ ೬.೩೦ಕ್ಕೆ ಬೆಂಗಳೂರು ರಾಷ್ಟ್ರೀಯ ನಾಟಕ ಶಾಲೆ ತಂಡದಿಂದ ಚಂದ್ರಶೇಖರ ಕಂಬಾರರು ರಚಿಸಿದ ಶಿವರಾತ್ರಿ, 16ರ ಸಂಜೆ 6.30ಕ್ಕೆ ರಂಗ ವೃಕ್ಷ ನಾಟಕ ನೃತ್ತ ಸೇವಾ ಸಂಘ ತಂಡದಿಂದ ಡಾ.ವಿಶ್ವರಾಜ ಪಾಟೀಲ್ ರಚಿತ ಶರಣ ಸಿಂಚನ ಹಾಗೂ 17ರ ಸಂಜೆ 6.30ಕ್ಕೆ ಧಾತ್ರಿ ರಂಗ ಸಂಸ್ಥೆ ತಂಡದಿಂದ ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ರಚಿಸಿದ ಮೋಳಿಗೆ ಮಾರಯ್ಯ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನೀಡಿದರು.
ಪ್ರಮುಖರಾದ ಶಾಂತಲಿAಗಯ್ಯ ಮಠಪತಿ, ಲಿಂಗಯ್ಯ ಉಪಸ್ಥಿತರಿದ್ದರು.