ಬಸವಣ್ಣನವರ ತತ್ವಗಳು ಸರ್ವಕಾಲಿಕ
|ಎಸ್ ಎಸ್ ವಾಲಿ ಅಭಿಪ್ರಾಯ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಮಹಾನ್ ಮಾನವತಾವಾದಿ ಬಸವಣ್ಣನವರ ತತ್ವ ಆದರ್ಶಗಳು ಸರ್ವಕಾಲಿಕವಾಗಿವೆ ಎಂದು ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್ ಎಸ್ ವಾಲಿ ಅಭಿಪ್ರಾಯ ಪಟ್ಟರು.
ನಗರದ ರವಿವಾರ ಪೇಟೆಯಲ್ಲಿರುವ ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಈಚೆಗೆ ನಡೆದ ಬಸವಣ್ಣನವರ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸವ ಸಮಿತಿ ಪ್ರಕಟಿಸಿರುವ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಬಸವಣ್ಣನವರ ಜೀವನ, ವಿದ್ಯಾಭ್ಯಾಸ, ಕಾಯಕ ಜೀವನ ,ಸಾಧನೆಗಳನ್ನು ಒಳಗೊಂಡಿದ್ದು,ಜನರಿಗೆ ಉತ್ತಮ ಸಂದೇಶ ನೀಡಲಾಗಿದೆ ಎಂದರು.
ಹೊನ್ನಿಹಳ್ಳಿ ಗ್ರಾಮದ ಬರಹಗಾರ ಯಶವಂತ ಉಚಗಾಂವಕರ ಮಾತನಾಡಿದರು.ಪತ್ರಕರ್ತ ಬಿ.ಎಚ್. ಹೊಂಗಲ,ಮೋಹನ ಪಾಟೀಲ,ಮಹೇಶ ಉಚಗಾಂವಕರ ಇತರರಿದ್ದರು.