ಸಕಲೇಶಪುರ: ಪಟ್ಣಣದ ಬಸವೇಶ್ವರ ರಸ್ತೆಯಲ್ಲಿ ಅಸ್ವರೂಡ ಬಸವಣ್ಣನವರ 18 ಅಡಿ ಎತ್ತರದ ಪ್ರತಿಮೆ ಶೀಘ್ರ ಅನಾವರಣಗೊಳ್ಳಲಿದೆ ಎಂದು ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದಿವಾನ್ ಹೇಳಿದರು.
ಶುಕ್ರವಾರ ಬಸವಣ್ಣನವರ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿ, ಸಮಾನತೆಯ ಹರಿಕಾರ ಎಂದು ಕೆರಯಲ್ಪಡುವ ಬಸವಣ್ಣ ಯಾವುದೆ ಜಾತಿಮತಕ್ಕೆ ಸೀಮಿತ ಗೊಂಡ ಮಹಾತ್ಮರಲ್ಲ. ಎಲ್ಲ ಜಾತಿ ಸಮೂದಾಯದವರು ಬಸವಣ್ಣನವರನ್ನು ಪೂಜ್ಯಭಾವದಿಂದ ಆರಾಧಿಸುತಿದ್ದು ಇಂತಹ ಮಹಾತ್ಮರ 18 ಅಡಿ ಎತ್ತರದ ಅಸ್ವರೂಡ ಬಸವಣ್ಣನವರ ಕಂಚಿನ ಪ್ರತಿಮೆ ಸ್ಥಾಪಿಸಲಾಗುತಿದ್ದು ಮುಂದಿನ ದಿನಗಳಲ್ಲಿ ಇದೊಂದು ಪೂಜಾ ಹಾಗೂ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾರ್ಪಡಿಸಲಾಗುವುದು ಎಂದರು.
ವೀರಶೈವ ಮುಖಂಡ ಬಾಳ್ಳುಮಲ್ಲಿಕಾರ್ಜುನ್ ಮಾತನಾಡಿ, ಬಸವಣ್ಣನವರ ಪ್ರತಿಮೆಯನ್ನು ಸುಮಾರು 60 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತಿದೆ. ಬಸವಣ್ಣ ಹಾಕಿಕೊಟ್ಟ ಪರಂಪರೆಯನ್ನು ಮುಂದುವರೆಸಿಕೊಂಡು ಬಂದ ಸಿದ್ದಗಂಗೆ ಶ್ರೀ ಶಿವಕುಮಾರಸ್ವಾಮಿಜಿಯವರ ಪ್ರತಿಮೆಯನ್ನು ಗುರುವೇಗೌಡ ಕಲ್ಯಾಣ ಮಂಟಪದ ಅವರಣದಲ್ಲಿ ಸ್ಥಾಪನೆ ಮಾಡುವ ಮೂಲಕ ಇಬ್ಬರು ಮಹಾತ್ಮರಿಗೆ ಸಮಾಜದಿಂದ ಗೌರವ ಸಲ್ಲಿಸಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಆರ್ ಗುರುದೇವ್, ಸಮಾಜದ ಕಾರ್ಯದರ್ಶಿ ಮೂಗಲಿ ದರ್ಮಣ್ಣ, ಮುಖಂಡ ಯಡೇಹಳ್ಳಿ ಮಂಜುನಾಥ್, ಅಕ್ಕಮಹಾದೇವಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಶಿಕಲಾ ಲೋಕೇಶ್,ಯುವ ವೇದಿಕೆ ಅಧ್ಯಕ್ಷ ಶಶಿಕುಮಾರ್ ಮುಂತಾದವರಿದ್ದರು.