ಜಿಲ್ಲೆ

ನಿಂತ ಬಸ್​ಗೆ ಕಾರು ಡಿಕ್ಕಿ, ಬಾಲಕ ಸಾವು

Belagavi

ಉಳ್ಳಾಗಡ್ಡಿ&ಖಾನಾಪುರ: ಸಮೀಪದ ನರಸಿಂಗಪುರ ಗ್ರಾಮದ ಬಳಿ ಬುಧವಾರ ರಾಜ್ಯ ರಸ್ತೆ ಸಾರಿಗೆ ಬಸ್​ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಬಾಲಕ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದ ಸತರಾ ಜಿಲ್ಲೆಯ ನಡೋಜಿ ಗ್ರಾಮದ ಸಿದ್ಧಿಕ್​ ಸಾಧಿಕ್​ ಮುಲ್ಲಾ (6) ಮೃತ ಬಾಲಕ. ಅದೇ ಗ್ರಾಮದ ಸಾಧಿಕ್​ ಮುಲ್ಲಾ, ಜಾವೇದ್​ ಮುಲ್ಲಾ, ಜಲ್​ ಮುಲ್ಲಾ, ಅಲಿನಾ ಮುಲ್ಲಾ ಹಾಗೂ ಶಿರಿನ್​ ಮುಲ್ಲಾ ಗಾಯಗೊಂಡವರು.

ಬೆಳಗಾವಿಯಿಂದ ಸಂಕೇಶ್ವರದತ್ತ ಹೊಗುತ್ತಿದ್ದ ಬಸ್​ ನರಸಿಂಗಪುರ ಬಳಿ ನಿಂತಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಯಮಕನಮರಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.