ಕಲಬುರಗಿ: ನಗರದ ತುಂಗಾ ಕಾಲನಿಯಲ್ಲಿ ರಸ್ತೆ ನಿರ್ಮಾಣದ ವೇಳೆ ತೆರವುಗೊಳಿಸಿದ್ದ ಬಸವಣ್ಣ ಧ್ವಜವನ್ನು ಸೋಮವಾರ ಮರುಸ್ಥಾಪನೆ ಮಾಡಲಾಯಿತು. ಹಲವು ವರ್ಷದ ಹಿಂದೆ ಪ್ರತಿಷ್ಠಾಪಿಸಿದ್ದ ಬಸವ ಧ್ವಜಕ್ಕೆ ಕಾಲನಿಯ ಜನರು ನಿತ್ಯ ಪೂಜೆ, ಮಾಡುತ್ತಿದ್ದರು. ಇತ್ತೀಚೆಗೆ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿತ್ತು. ಇದೀಗ ಕಾಲನಿಯ ಜನರು ಕೂಡಿಕೊಂಡು ನೂತನ ಧ್ವಜ ಸ್ಥಂಭ ನಿರ್ಮಿಸಿ, ಪ್ರತಿಷ್ಠಾಪಿಸಿದರು. ಪ್ರಮುಖರಾದ ಲಕ್ಷö್ಮಣ ದಾಂಡೇಕರ್, ಜ್ಯೋತಿ ವಾರದ, ದಾನಪ್ಪ ಉಪ್ಪಿನ್, ಮೈತ್ರಾ ಜಮಾದಾರ, ಚಂದ್ರಕಾAತ ವಾರದ್, ಶಶಿಕಲಾ ದಾಖಲೆ ಇತರರಿದ್ದರು.