ಸರಗೂರು ತಾಲೂಕಿನ ಪಟ್ಟಣದ ಬಿಡಗಲು ಗ್ರಾಮದ ಪಡುವಲು ಶ್ರೀ ವಿರಕ್ತಮಠದಲ್ಲಿ ನಡೆದ ಪೌರ್ಣಮಿ ಪೂಜೆ ಮತ್ತು ಶಿವಾನುಭವ ಸಮ್ಮೇಳನವನ್ನು ಕಾರ್ಯಕ್ರಮವನ್ನು ಸಾಹಿತಿ ಡಾ. ಎಸ್ ಪುಟ್ಟಪ್ಪ ಮುಡಿಗುಂಡಂ ಉದ್ಘಾಟಿಸಿದರು. ಶ್ರೀ ಮಹದೇವ ಸ್ವಾಮೀಜಿ, ಎಚ್.ಕೆ.ಮಹದೇವ, ನವೀನ್ ಕುಮಾರ್ ಇತರರಿದ್ದರು. 
ಜಿಲ್ಲೆ

ಬಸವಣ್ಣನ ತತ್ವಾದರ್ಶದಂತೆ ಜೀವನ ನಡೆಸಿ

ಸರಗೂರು; ಮನುಷ್ಯನು ಆಸೆಯಿಂದ ದೂರವಿರಬೇಕು. ಬಸವಣ್ಣನ ತತ್ವ, ಆದರ್ಶದಂತೆ ಜೀವನ ನಡೆಸಬೇಕು ಎಂದು ಸಾಹಿತಿ ಡಾ.ಎಸ್. ಪುಟ್ಟಪ್ಪ ಮುಡಿಗುಂಡಂ ಹೇಳಿದರು.

ಪಟ್ಟಣದ ಬಿಡಗಲು ಗ್ರಾಮದಲ್ಲಿರುವ ಪಡುವಲು ಶ್ರೀ ವಿರಕ್ತಮಠದಲ್ಲಿ ಭಾನುವಾರ ನಡೆದ ಪೌರ್ಣಮಿ ಪೂಜೆ ಮತ್ತು ಶಿವಾನುಭವ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳು ವಿದ್ಯಾವಂತರಿಂದಲೇ ನಡೆಯುತ್ತಿರುವುದು ದುರದೃಷ್ಟಕರ. ಹೀಗಾಗಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವನ್ನು ಕಲಿಸಬೇಕಾದ್ದು ಬಹಳ ಅವಶ್ಯಕ. ಅದಕ್ಕಾಗಿ ಬಸವಾದಿ ಶಿವಶರಣರ ವಚನಗಳು ಬಹಳ ಉಪಯುಕ್ತವಾಗಿವೆ ಎಂದು ಹೇಳಿದರು.

ಮಠಾಧ್ಯಕ್ಷರಾದ ಶ್ರೀ ಮಹದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುಣಸೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಕೆ. ಮಹದೇವ್, ಪಿರಿಯಾಪಟ್ಟಣ ತಾಲೂಕು ಕಸಾಪ ಅಧ್ಯಕ್ಷ ನವೀನ್‌ಕುಮಾರ್ ಭಾಗವಹಿಸಿದ್ದರು. ಪೂಜೆ ಮತ್ತು ದಾಸೋಹ ಸೇವಾರ್ಥದಾರರಾದ ಮಲ್ಲಣ್ಣ, ಲಿಂಗರಾಜು ಅವರನ್ನು ಶ್ರೀಮಠದ ಪರವಾಗಿ ಗೌರವಿಸಲಾಯಿತು. ಸಹಸ್ರಾರು ಭಕ್ತರು ಪೂಜೆ ಮತ್ತು ಪ್ರಸಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.