ಚಿತ್ರದುರ್ಗ:ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8ರಿಂದ 10ರವರೆಗೆ ಶ್ರೀ ಬಸವೇಶ್ವರ ಜಯಂತಿ ಕಾರ‌್ಯಕ್ರಮಗಳ ನ್ನು ಆಯೋಜಿಸಲಾಗಿದೆ. ಇದರ ಅಂಗವಾಗಿ 9ರಂದು ಬೆಳಗ್ಗೆ 10 ಗಂಟೆಗೆ ವಚನಗಳ ಕಂಠಪಾಠ ಸ್ಪರ್ಧೆ(ವಯಸ್ಸಿನ ಮಿತಿ ಇಲ್ಲ),12ನೇ ಶತಮಾನದ ಬಸವಾದಿ ಶರಣರ ವೇಷಭೂಷಣ ಸ್ಪರ್ಧೆ,ರಂಗೋಲಿ ಸ್ಪರ್ಧೆ ಮತ್ತು ಬಸವಾದಿ ಶಿವಶರಣರ ಕುರಿತಾದ ಭಜನಾ ಸ್ಪರ್ಧೆಯ ನ್ನು ಏರ್ಪಡಿಸಲಾಗಿದೆ. ಈ ಎಲ್ಲ ಸ್ಪರ್ಧೆಗಳಿಗೆ ಪ್ರವೇಶ ಉಚಿತವಿದೆ. ಆಸಕ್ತರು ತೋಟಪ್ಪ ಉತ್ತಂಗಿ(9901124515),ಉಮೇಶ್‌ಪತ್ತಾರ್ (7846033315)ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಲು ಶ್ರೀ ಮಠದ ಪ್ರಕಟಣೆ ತಿಳಿಸಿದೆ.