ಬಸವಕಲ್ಯಾಣ: ಶ್ರೀ ಬನಶಂಕರಿ ಓಣಿಯಲ್ಲಿಯಲ್ಲಿ ಶ್ರೀ ಬನಶಂಕರಿ ದೇವಿಯ ೪೫ನೇ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ತಡ ರಾತ್ರಿ ಭಕ್ತರ ಜೈಘೋಷಗಳ ಮಧ್ಯೆ ಅದ್ದೂರಿಯ ರಥೋತ್ಸವ ಜರುಗಿತು.
ನಗರದ ವಿವಿಧ ಬಡಾವಣೆಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಅಲಂಕೃತ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಬಿಜೆಪಿ ಮುಖಂಡ ಪ್ರದೀಪ ವಾತಡೆ ಚಾಲನೆ ನೀಡುತ್ತಿದ್ದಂತೆ ಶ್ರೀ ಬನಶಂಕರಿ ಮಾತಾಕಿ ಜೈ ಎನ್ನುವ ಘೋಷಣೆಗಳು ಮೊಳಗಿದವು. ಭಕ್ತಿ ಶೃದ್ಧೆಯಿಂದ ಭಕ್ತರು ರಥವನ್ನೆಳೆದರೆ ರಸ್ತೆ ಬದಿಯಲ್ಲಿ ಕಿಕ್ಕಿರಿದು ತುಂಬಿದ ಜನರು ರಥದ ಕಡೆಗೆ ಖಾರಿಕ, ಅಳ್ಳು, ನಾಣ್ಯಗಳನ್ನು ಹಾರಿಸಿ ಸಂಭ್ರಮಿಸಿದರು.
ರಥೋತ್ಸವಕ್ಕೂ ಮುನ್ನ ನಗರದಲ್ಲಿ ಶ್ರೀ ಬನಶಂಕರಿ ದೇವಿ ಪಲ್ಲಕ್ಕಿ ಮೆರವಣಿಗೆ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು. ಶ್ರೀ ಬನಶಂಕರಿ ದೇವಸ್ಥಾನದಿಂದ ಸುಭಾಷ ಚೌಕ, ಶ್ರೀ ಬಸವೇಶ್ವರ ದೇವಸ್ಥಾನ, ಕಾಳಿ ಗಲ್ಲಿ, ಪರುಷ ಕಟ್ಟೆ, ಭವಾನಿ ಮಂದಿರ, ಗಾಂಧಿ ವೃತ್ತದ ಮೂಲಕ ಮುಖ್ಯಮಾರ್ಗವಾಗಿ ಬಸವೇಶ್ವರ ವೃತ್ತದವರೆಗೆ ನಡೆದ ಮೆರವಣಿಗೆ ಪುನಃ ದೇವಸ್ಥಾನಕ್ಕೆ ಮರಳಿದ ನಂತರ ರಥೋತ್ಸವ ಜರುಗಿತು.
ಪಲ್ಲಕ್ಕಿಯೊಂದಿಗೆ ಅಲಂಕೃತ ವಾಹನದಲ್ಲಿ ದೇವಿ ಮೂರ್ತಿ, ಇನ್ನೊಂದು ವಾಹನದಲ್ಲಿ ದೇವರ ದಾಸಿಮಯ್ಯನವರ ಭಾವಚಿತ್ರದೊಂದಿಗೆ ನಡೆದ ವೃಭವದ ಮೆರವಣಿಗೆಯಲ್ಲಿ ಡೊಳ್ಳು ಕಲಾ ತಂಡ ಹಾಗೂ ಪುರವಂತರ ಪ್ರದರ್ಶನ ಗಮನ ಸೆಳೆಯಿತು. ಭಜನಾ ತಂಡದವರು ಭಕ್ತಿಯಿಂದ ಭಜನೆ ಮಾಡುತ್ತ ಹೆಜ್ಜೆ ಹಾಕಿದರು.
ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಡಾ.ಜಿ.ಎಸ್.ಭುರಳೆ, ಬಿಡಿಪಿಸಿ ನಿರ್ದೇಶಕ ಮಲ್ಲಯ್ಯ ಸ್ವಾಮಿ, ಸಿಪಿಐ ಅಲಿಸಾಬ್, ಪಿಎಸ್‌ಐ ಅಂಬರೀಷ ವಾಗ್ಮೋಡೆ, ಪ್ರಮುಖರಾದ ನೀಲಕಂಠಪ್ಪ ಮುನ್ನೊಳೆ, ಕಿರಣ ಆರ್ಯ, ಅಮರ ಬಡದಾಳೆ, ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ, ಅಮೂಲ ಆರ್ಯ, ಪಂಚ ಕಮಿಟಿಯ ಉಪಾಧ್ಯಕ್ಷ ಶರಣಪ್ಪ ಮೆಂಗದೆ, ಕಾರ್ಯದರ್ಶಿ ದಿಲೀಪ ರುಮ್ಮಾ, ಜಂಟಿ ಕಾರ್ಯದರ್ಶಿ ಬಸವಂತಪ್ಪ ಭುರಳೆ, ಬಾಬು ಹೆಗ್ಗೆ, ಕಾಶಪ್ಪ ಕಡಗಂಚಿ, ಬಸವರಾಜ ಬಂದಗೆ, ಸುರೇಶ ಅಡಕೆ, ಅಶೋಕ ಹಿಪ್ಪರಗೆ, ಸೋಮನಾಥ ಮತಗುಂಡೆ, ಶಂಕರ ಹೋಳಗೆ, ಶಾಂತು ಮೆಂಗದೆ, ಮಲ್ಲಪ್ಪ ಕಡಗಂಚಿ, ಶಂಕರ ಮ್ಯಾಕಾ, ಗೋವಿಂದ ಕನಕಾ, ಸೂರ್ಯಕಾಂತ ಭುರಳೆ, ಮಹಾದೇವ ಹುಡಗೆ, ಸಚಿನ ಹುಡಗೆ, ಸುಶೀಲಾಬಾಯಿ ಧನ್ನೂರೆ ಇದ್ದರು.