ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ೨೭ ಜನ ಬಲಿಯಾದವರಿಗೆ ಬಸವಕಲ್ಯಾಣದಲ್ಲಿ ಬುಧವಾರ ಸಂಜೆ ಬಿಜೆಪಿಯಿಂದ ಮೌನ ಕ್ಯಾಂಡಲ್ ಮಾರ್ಚ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಸಕ ಶರಣು ಸಲಗರ, ಸಿದ್ದು ಬಿರಾದಾರ, ಕೃಷ್ಣಾ ಗೋಣೆ, ಅರವಿಂದ ಮುತ್ತೆ, ಮನೋಜ ತಂಬುರ್ಚಿ, ಶಿವಡಿಂಜ ಮೆಂಗದೆ, ರಾಜು ರಾಜೋಳೆ, ಬಾಬುರಾವ ಹಿಂಸೆ, ಶಂಕರ ನಾಗದೆ ಇತರರಿದ್ದರು. 
ಜಿಲ್ಲೆ

ಬಸವಕಲ್ಯಾಣದಲ್ಲಿ ಮೌನ ಮೆರವಣಿಗೆ

ಬಸವಕಲ್ಯಾಣ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ೨೭ ಜನ ಬಲಿಯಾದವರಿಗೆ ನಗರದಲ್ಲಿ ಬುಧವಾರ ಸಂಜೆ ಬಿಜೆಪಿ ಮೌನ ಕ್ಯಾಂಡಲ್ ಮಾರ್ಚ್ ನಡೆಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತು.

ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಕ್ಯಾಂಡಲ್ ಹಿಡಿದು ಮೌನ ನಡಿಗೆ ನಡೆಸಿ ಮಾನವ ಸರಪಳಿ ನಿರ್ಮಿಸಿ ಉಗ್ರರ ಹೇಯ ಕೃತ್ಯವನ್ನು ಖಂಡಿಸಿತು.

ಶಾಸಕ ಶರಣು ಸಲಗರ ಮಾತನಾಡಿ, ಹಿಂದುಗಳನ್ನೇ ಟಾರ್ಗೆಟ್ ಮಾಡಿ ಪತ್ನಿ-ಮಕ್ಕಳ ಎದುರಲ್ಲೇ ಅಮಾಯಕರ ಹತ್ಯೆ ಮಾಡಿದ್ದು ಇಡೀ ಭಾರತೀಯರಿಗೆ ನೋವು ತಂದಿದೆ. ದಾಳಿ ನಡೆಸಿದ ಉಗ್ರರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ತಕ್ಕ ಪಾಠ ಕಲಿಸುವ ವಿಶ್ವಾಸವಿದೆ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಸಿದ್ದು ಬಿರಾದಾರ, ಪ್ರಮುಖರಾದ ಕೃಷ್ಣಾ ಗೋಣೆ, ಸೂರ್ಯಕಾಂತ, ಅರವಿಂದ ಮುತ್ಯೆ, ಪ್ರದೀಪ ಗಟವಂತೆ, ಶಿವಕುಮಾರ ಅಗ್ರೆ, ರಾಜು ರಾಜೋಳೆ, ರಾಜು ಕಾಲೇಕರ್, ಮನೋಜ ತಂಬುರ್ಚಿ, ಶಿವರಾಜ ಮೆಂಗದೆ, ಶಂಕರ ನಾಗದೆ, ರಾಜಕುಮಾರ ಅಲಶೆಟ್ಟೆ, ಅಮುಲ್ ಆರ್ಯ, ಸಂತೋಷ ಸಾಳುಂಕಿ, ಲಕ್ಷ್ಮೀಪುತ್ರ ನಿಂಬಾಳಕರ್, ಬಾಬುರಾವ ಹಿಂಸೆ, ಮುಕೇಶ ಪಾಟೀಲ್, ಬಾನುರಾವ ಹಿಂಸೆ, ಅನೀಲ ದೇಗಲೂರೆ, ರಮೇಶ ಸಿಂಧೆ, ದಿನೇಶ ಅಗ್ರೆ, ನಿತ್ಯಾನಂದ ದೇಗಲೂರೆ, ರಾಜಕುಮಾರ ಹಲಶೆಟ್ಟಿ, ಅಮರಶೆಟ್ಟಿ ಇತರರಿದ್ದರು.