ಬಸವಕಲ್ಯಾಣ: ಶ್ರೀ ಕೊತ್ತಲ ಬಸವೇಶ್ವರ ಭಾರತಿಯ ಶಿಕ್ಷಣ ಸಮಿತಿ ಹಾಗೂ ವಿಕಾಸ ಅಕಾಡೆಮಿ ಕಲಬುರಗಿ ಮತ್ತು ಭಾರತ ವಿಕಾಸ ಸಂಗಮ ನೇತೃತ್ವದಲ್ಲಿ ನಡೆಯಲಿರುವ ೭ನೇ ಭಾರತೀಯ ಸಂಸ್ಕೃತಿ ಉತ್ಸವದ ಪ್ರಚಾರದ ನಿಮಿತ್ತ ಬೀದರ್ ಜಿಲ್ಲೆಯಿಂದ ನಗರಕ್ಕೆ ಆಗಮಿಸಿದ ಉತ್ಸವದ ಬಸವ ರಥಯಾತ್ರೆಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು
ಶ್ರೀ ಬಸವೇಶ್ವರ ದೇವಸ್ಥಾನದ ಹತ್ತಿರ ರಥಕ್ಕೆ ಪೂಜೆ ಸಲ್ಲಿಸಿದ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ೨೯ರಿಂದ ಫೆ.೬ರವರೆಗೆ ಸೇಡಂನಲ್ಲಿ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ನಗರದಲ್ಲಿ ಪ್ರಚಾರ ರಥ ಸಂಚಾರಕ್ಕೆ ಚಾಲನೆ ನೀಡಿದರು. ಉಪಾದ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಪ್ರಮುಖರಾದ ಜಗನ್ನಾಥ ಪತಂಗೆ, ಸೂರ್ಯಕಾಂತ ಶೀಲವಂತ, ರಮೇಶ ಧಬಾಲೆ, ಸುನಿಲ್ ಮದಕಟ್ಟಿ, ಶಿವರಾಜ ತಾಟೆ, ಭೀಮಣ್ಣ ಮೈನಾಳೆ, ರಾಜಪ್ಪ ಬಿರಾದಾರ್, ಬಸವರಾಜ ಅಷ್ಟಗಿ, ರಾಜು ಮಮ್ಮಾ, ರಾಜಶೇಖರ ಶೇರಿಕಾರ ಹಾಗೂ ಶಾಲೆ ಮಕ್ಕಳು ಭಾಗವಹಿಸಿದ್ದರು.
ಪ್ರಕಾಶ ಬಿರಾದಾರ ಸ್ವಾಗಸಿದರು. ಸಂಗಮೇಶ ತೊಗರಿಖೇಡೆ ನಿರೂಪಣೆ ಮಾಡಿದರು.