ಜಿಲ್ಲೆ

ಬಸವಕಲ್ಯಾಣದಲ್ಲಿ ಓಟದ ಸ್ಪರ್ಧೆ

ಬಸವಕಲ್ಯಾಣ: ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಹಾಗೂ ಶಾಲೆ-ಕಾಲೇಜುಗಳ ಕ್ಯಾಂಪಸ್‌ನಲ್ಲಿ ಪ್ರಜಾಪ್ರಭುತ್ವದ ಮೌಲ್ಯ ಕಾಪಾಡಲು ಸ್ಟುಡೆಂಟ್ ಇಸ್ಲಾಮಿಕ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಐಒ) ಸಂಘಟನೆಯಿAದ `ಅರಿವಿನ ನಾಳೆಗಾಗಿ' ಅಭಿಯಾನ ನಿಮಿತ್ತ ನಗರದಲ್ಲಿ ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆ ಶನಿವಾರ ನಡೆಯಿತು.

ನಗರದ ನೂಲಿ ಚಂದಯ್ಯ ಉದ್ಯಾನದಿಂದ ಮುಖ್ಯ ರಸ್ತೆ ಮಾರ್ಗವಾಗಿ ಗಾಂಧಿ ವೃತ್ತದವರೆಗೆ ಏರ್ಪಡಿಸಿದ್ದ ಓಟದ ಸ್ಪರ್ಧೆಯಲ್ಲಿ ನಗರದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಪಾರಿವಾಳ ಹಾರಿಸುವ ಮೂಲಕ ಚಾಲನೆ ನೀಡಿದರು. ಪಾಸ್ಟರ್ ಇಮಾನ್ಯುಯಲ್, ಹಫೀಜ್ ಮೀರ್ ಫರಖುಂದ್ ಅಲಿ, ಎಸ್‌ಐಒ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹ್ಮದ್ ನಸೀರ್, ಜಮಾತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಹಫೀಜ್ ಅಸ್ಲಮ್, ಸೈಯದ್ ಜಾವೀದ್ ಮತೀನ್, ಜಿಲ್ಲಾಧ್ಯಕ್ಷ ಡಾ.ಜಬೀಉಲ್ಲಾ ಖಾನ್ ಇತರರಿದ್ದರು.