ಮಾರ್ಥಂಡ ಜೋಶಿ ಬಸವಕಲ್ಯಾಣ
ಸ್ಥಳೀಯ ಸಂಸದರೂ ಆದ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ,ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಸ್ಥಳೀಯ ಬಿಜೆಪಿ ಶಾಸಕ ಶರಣು ಸಲಗರ ನಡುವಿನ ಬೀದಿ ರಂಪಾಟದ ಬೆನ್ನಲ್ಲೇ, ಅಧಿಕಾರಿಗಳ ವಗರ್ಾವಣೆ ಸಂಘರ್ಷ ಶುರುವಾಗಿದ್ದು, ಜಿಲ್ಲಾ ರಾಜಕೀಯದಲ್ಲಿ ಹಲ್ಚಲ್ ಸೃಷ್ಟಿಸಿದೆ.
ಶಾಸಕ ಶರಣು ಸಲಗರ ಅವರ ಪತ್ನಿಯಾಗಿರುವ ತಹಸೀಲ್ದಾರ್ ಸಾವಿತ್ರಿ ಅವರನ್ನು ಸೋಮವಾರ ಇಲ್ಲಿಂದ ಕಲಬುರಗಿಗೆ ವಗರ್ಾವಣೆ ಮಾಡಿ ಸಕರ್ಾರ ಆದೇಶ ಹೊರಡಿಸಿತ್ತು. ಸಚಿವ-ಶಾಸಕರ ನಡುವಿನ ಬೀದಿ ಕಾಳಗದ ಜತೆಗೆ ಈ ವರ್ಗವು ಥಳಕು ಹಾಕಿಕೊಂಡು ಭಾರಿ ಚಚರ್ೆಗೆ ಕಾರಣವಾಗಿತ್ತು. ಈ ಮಧ್ಯೆ ಮಂಗಳವಾರ ತಹಸೀಲ್ದಾರ್ ಸಾವಿತ್ರಿ ವರ್ಗಕ್ಕೆ ಸಕರ್ಾರ ತಡೆಹಿಡಿದು ಮರು ಆದೇಶ ಹೊರಡಿಸಿದೆ! 24 ಗಂಟೆಯಲ್ಲಿನ ಈ ಎಲ್ಲ ಬೆಳವಣಿಗೆಗಳು ಮತ್ತೊಂದು ಹಂತದ ಟೀಕೆ, ಟಿಪ್ಪಣಿಗಳಿಗೆ ಕಾರಣವಾಗಿದ್ದು, ಸ್ವಪಕ್ಷೀಯರ ನಡುವಿನ ವರ್ಗ ಸಂಘರ್ಷಕ್ಕೆ ನಾಂದಿ ಹಾಡಿದೆ.
ಸಾವಿತ್ರಿ ಅವರನ್ನು ಕಲಬುರಗಿ ಡಿಸಿ ಕಚೇರಿಯ ಶಿಷ್ಟಾಚಾರ ವಿಭಾಗದ ತಹಸೀಲ್ದಾರ್ ಹುದ್ದೆಗೆ ಹಾಗೂ ಇಲ್ಲಿಗೆ ಸ್ಥಳ ನಿರೀಕ್ಷೆಯಲ್ಲಿದ್ದ ಕಲಬುರಗಿಯ ಗ್ರೇಡ್-2 ತಹಸೀಲ್ದಾರ್ ರಮೇಶ ಬಾಬು ಅವರನ್ನು ವರ್ಗ ಮಾಡಿ ಸೋಮವಾರ ಕಂದಾಯ ಇಲಾಖೆಯ ಅಧೀನ ಕಾರ್ಯದಶರ್ಿ ಜಿ.ಎನ್.ಸುಶೀಲ ಆದೇಶಿಸಿದ್ದರು. ಆದರೆ ಮಂಗಳವಾರ ಇದಕ್ಕೆ ತಡೆಹಿಡಿದು ಮತ್ತೊಂದು ಆದೇಶ ಹೊರಡಿಸಿದ್ದಾರೆ. ಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಇದಕ್ಕೆ ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾರೆ. ವರ್ಗ ಹಾಗೂ ಬ್ರೇಕ್ ಆದೇಶದಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಎನ್ನುವ ಪದ ಬಳಸಲಾಗಿದೆ. ಆದರೆ ಇದಕ್ಕೆ ಸ್ಥಳೀಯರ್ಯಾರೂ ಒಪ್ಪುವಂಥ ಸ್ಥಿತಿಯಲ್ಲಿ ಇಲ್ಲ. ಇದಕ್ಕೆಲ್ಲ ಸ್ವಪಕ್ಷೀಯ ನಾಯಕರ ಮೈ ಬಡಾ-ತು ಬಡಾ ಎಂಬ ಪ್ರತಿಷ್ಠೆಯೇ ಕಾರಣ ಎಂದು ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ವಗರ್ಾವಣೆ ವಿಷಯ ಎಲ್ಲಿಲ್ಲದ ಚಚರ್ೆಗೆ ಎಡೆಮಾಡಿಕೊಟ್ಟಿದ್ದು, ಪಾಲಿಟಿಕ್ಸ್ ಗರಂ ಮಾಡಿದೆ.
ತಾರಕಕ್ಕೇರುತ್ತಿದೆ ಆಂತರಿಕ ಕಲಹ: ಸಚಿವ ಭಗವಂತ ಖೂಬಾ ಮತ್ತು ಶಾಸಕ ಸಲಗರ ನಡುವಿನ ಸಂಬಂಧ ಕೆಲ ತಿಂಗಳಿಂದ ಪೂರ್ಣ ಹಳಸಿದೆ. ಉಪ ಚುನಾವಣೆ ವೇಳೆ ಇಬ್ಬರೂ ಅತ್ಯಾಪ್ತರಿದ್ದರು! ಅದೇಕೋ ಸಂಬಂಧ ಬಿಗಡಾಯಿಸಿದೆ. ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಕಳೆದ 13 ರಂದು ಇಲ್ಲಿ ನಡೆದಿದ್ದ ಕಾರ್ ರ್ಯಾಲಿ ವೇಳೆ ಇಬ್ಬರ ಬೆಂಬಲಿಗರ ನಡುವೆ ನಡೆದ ಬೀದಿ ಜಗಳವಾಗಿದೆ. ಇಬ್ಬರೂ ಕುಸ್ತಿಗೆ ಇಳಿದಿರುವಂಥ ವರ್ತನೆಯೂ ತೋರಿದ್ದರು. ಈ ಹಾದಿ ರಂಪಾಟ ಇಬ್ಬರ ಬೆಂಬಲಿಗರ ನಡುವೆ ಪೊಲೀಸ್ ಪ್ರಕರಣವೂ ದಾಖಲಿಸಿತ್ತು. ಇದೆಲ್ಲವೂ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸಾಬೀತುಪಡಿಸಿದೆ. ಇದಾದ ಒಂದು ವಾರದಲ್ಲೇ ಶಾಸಕರ ಪತ್ನಿ. ತಹಸೀಲ್ದಾರ್ ಸಾವಿತ್ರಿ ವಗರ್ಾವಣೆಯಾಗಿದೆ. ಈ ವಗರ್ಾವಣೆ ಸಕರ್ಾರದ ನಿಯಮದಂತೆ ಆಗಿದೆಯೋ ಇಲ್ಲವೋ ಬೇರೆ ವಿಷಯ. ಆದರೆ ಇದಕ್ಕೆ 13ರ ಗಲಾಟೆಯೇ ಕಾರಣ ಎಂಬ ಬಗ್ಗೆ ಚಚರ್ೆ ನಡೆದಿರುವುದು ರಾಜಕೀಯ ಸಂಘರ್ಷ ಸೃಷ್ಟಿಸಿದೆ. ಇಬ್ಬರ ನಡುವಿನ ರಾಜಕೀಯ ಕಿರಿಕ್ ದಿನೇ ದಿನೆ ತಾರಕಕ್ಕೇರುತ್ತಿದ್ದು, ಶಿಸ್ತಿನ ಪಕ್ಷದಲ್ಲಿನವರ ಈ ಬೆಳವಣಿಗೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಇನ್ನಿಬ್ಬರ ಎತ್ತಂಗಡಿಯೂ ಚಚರ್ೆ: ತಹಸೀಲ್ದಾರ್ ವರ್ಗ, ಅದಕ್ಕೆ ತಡೆ ವಿಷಯ ಭಾರಿ ಕೋಲಾಹಲ ಎಬ್ಬಿಸಿದ ಬೆನ್ನಲ್ಲೇ ಎರಡ್ಮೂರು ದಿನಗಳಲ್ಲೇ ಇನ್ನಿಬ್ಬರು ಅಧಿಕಾರಿಗಳ ವರ್ಗ ನಡೆದಿರುವುದು ಸಹ ಈಗ ಚಚರ್ೆಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವರ್ಗ ಸಂಘರ್ಷ ವಿಷಯ ಹರಿದಾಡುತ್ತಿದೆ. ಕಳೆದ ಜುಲೈ ಕೊನೇ ವಾರ ಇಲ್ಲಿಗೆ ವರ್ಗವಾಗಿ ಬಂದಿದ್ದ ಸಿಪಿಐ ರಘುವೀರಸಿಂಗ್ ಠಾಕೂರ್ ಅವರನ್ನು ಓಓಡಿ ಕರ್ತವ್ಯದ ಮೇಲೆ ಬೀದರ್ನ ಸೆನ್ ಠಾಣೆಗೆ ನಿಯುಕ್ತಿಗೊಳಿಸಿ ಎಸ್ಪಿ ಕಿಶೋರಬಾಬು ಆದೇಶ ಹೊರಡಿಸಿದ್ದಾರೆ. ಸೆನ್ ಠಾಣೆ ಸುಶೀಲಕುಮಾರ ಅವರಿಗೆ ಬಸವಕಲ್ಯಾಣ ಠಾಣೆಗೆ ಸಿಪಿಐ ಮಾಡಿ ನಿಯೋಜಿಸಿದ್ದಾರೆ. ಒಂದೇ ತಿಂಗಳೊಳಗೆ ರಘುವೀರಸಿಂಗ್ ಠಾಕೂರ್ ಅವರನ್ನು ಓಓಡಿ ಮೇಲೆ ಎತ್ತಂಗಡಿ ಮಾಡಿದ್ದು ಯಾಕೆ? ಎಂಬ ಚಚರ್ೆ ಶುರುವಾಗಿವೆ. ಲೋಕೋಪಯೋಗಿ ಇಲಾಖೆಯ ಇಲ್ಲಿನ ಪ್ರಭಾರಿ ಎಇಇ ಶರಣಗೌಡ ಪಾಟೀಲ್ ಸ್ಥಳಕ್ಕೆ ಇಲಾಖೆ ದಿಢೀರ್ ಬೀದರ್ ಉಪ ವಿಭಾಗದ ಎಇಇ ಅಶೋಕ ಖಂಡ್ರೆ ಅವರಿಗೆ ನೇಮಿಸಿ ಆದೇಶ ಹೊರಡಿಸಲಾಗಿದೆ. ಇದು ಸಹ ಮತ್ತಷ್ಟು ಚಚರ್ೆಗೆ ಗ್ರಾಸವಾಗಿದೆ. ಎಇ ಶರಣಗೌಡ ಪ್ರಭಾರಿ ಎಇಇ ನೋಡಿಕೊಳ್ಳುತ್ತಿದ್ದರು. ಎಇಇ ಹುದ್ದೆ ಇಲ್ಲಿ ಖಾಲಿಯೇ ಇತ್ತು. ಇದಕ್ಕೆ ಅಶೋಕ ಖಂಡ್ರೆಗೆ ನೇಮಿಸಲಾಗಿದೆ. ಆದಾಗ್ಯೂ ಶರಣಗೌಡ ಅವರಿಗೆ ಶಾಸಕರು ಇರಿಸಿಕೊಂಡಿದ್ದರು ಎನ್ನಲಾಗುತ್ತಿದೆ. ಈ ವಗರ್ಾವಣೆ ಸಹ ಸಚಿವರು ಮಾಡಿಸಿದ್ದಾರೆ ಎಂದು ಚಚರ್ೆಗಳಿಗೆ ಜೋಡಿಸಲಾಗುತ್ತಿದೆ.
ಯಾರ ಕೈಮೇಲು?: ತಹಸೀಲ್ದಾರ್ ಸಾವಿತ್ರಿ ಅವರ ವರ್ಗ ಹಾಗೂ ಇದಕ್ಕೆ ತಡೆ ವಿಷಯವು ಯಾರ ಕೈ ಮೇಲು ಎಂಬ ಗರಂ ಚಚರ್ೆಗೆ ಕಾರಣವಾಗಿದೆ. ನಿನ್ನೆ ಸಾವಿತ್ರಿ ವರ್ಗವಾದ ಬೆಳವಣಿಗೆ ಶಾಸಕ ಶರಣು ಸಲಗರಗೆ ಹಿನ್ನಡೆ, ಕೇಂದ್ರ ಸಚಿವ ಭಗವಂತ ಖೂಬಾ ಅವರ ಕೈಮೇಲು ಎಂದು ಕ್ಷೇತ್ರದ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ವಿಶ್ಲೇಷಣೆ ನಡೆದವು. ಆದರೆ ಇಂದಿನ ತಡೆ ಬೆಳವಣಿಗೆ ಶಾಸಕರ ಕೈ ಮೇಲೆ ಎನ್ನುವಂಥ ವಿಶ್ಲೇಷಣೆಗೆ ಕಾರಣವಾಗಿದೆ. ಒಟ್ಟಾರೆ ಕಲ್ಯಾಣದಲ್ಲಿನ ಒಂದು ವಾರದಲ್ಲಿನ ಬೆಳವಣಿಗೆಗಳು ಬೀದರ್ ಜಿಲ್ಲೆ ರಾಜಕೀಯದಲ್ಲಿ ಚಚರ್ೆಯ ವಿಷಯವಾಗಿ ಮಾರ್ಪಟ್ಟಿದ್ದು, ಬಿಜೆಪಿಯೊಳಗಿನ ಕೆಸರೆರಚಾಟ ಜನರಿಗೆ ಉಚಿತ ಮಜಾ ನೀಡುತ್ತಿದೆ.