ಜಿಲ್ಲೆ

ಬಸವ ವೃತ್ತ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಹಗರಿಬೊಮ್ಮನಹಳ್ಳಿ: ಪಟ್ಟಣದ ಬಸವೇಶ್ವರ ಬಜಾರದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿ ವೃತ್ತ ಅಭಿವೃದ್ಧಿ ಕಾಮಗಾರಿ ಬುಧವಾರ ಆರಂಭವಾಯಿತು.

ಶಾಸಕ ಕೆ.ನೇಮಿರಾಜ್ ನಾಯ್ಕ ಡಿಎಂಎಫ್‌ನ 50 ಲಕ್ಷ ರೂ. ವೆಚ್ಚದಲ್ಲಿ ವೃತ್ತ ನವೀಕರಣ ಕಾಮಗಾರಿಗೆ ಇತ್ತೀಚಿಗೆ ಚಾಲನೆ ನೀಡಿದ್ದರು.ಬಸವಪಥದ ಸದಸ್ಯರು ಕಾಮಗಾರಿ ಪರಿಶೀಲಿಸಿದರು. ಬಂಡಿಹಳ್ಳಿ ಮಂಜುನಾಥ ಮಾತನಾಡಿ, ಕಾಮಗಾರಿಯನ್ನು ಗುಣಮಟ್ಟದಿಂದ ಕೈಗೊಂಡು ವೃತ್ತವನ್ನು ಮತ್ತಷ್ಟು ಆಕರ್ಷಣೀಯಗೊಳಿಸಬೇಕೆಂದು ಹೇಳಿದರು. ಸಕ್ರಿಹಳ್ಳಿ ಕೊಟ್ರೇಶ, ಸತೀಶ್ ಪಾಟೀಲ್, ಗುರುಬಸವರಾಜ, ವೀರೇಶ, ವಿಶ್ವನಾಥ, ಗದ್ದಿಕೆರೆ ನಾಗಭೂಷಣ, ಕೊಟ್ರೇಶ ಮತ್ತಿತರರು ಇದ್ದರು.