ಜಿಲ್ಲೆ

ಬಸವ ಭಾವಚಿತ್ರಕ್ಕೆ ಅವಮಾನಕ್ಕೆ ಕಿಡಿ

ಹುಲಸೂರು: ಚಿತ್ತಾಪುರ ತಾಲೂಕಿನ ಹಲಕರ್ಟಿಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಂಥ ರಾಕ್ಷಸಿ ಪ್ರವೃತ್ತಿ ನಿಲ್ಲಬೇಕು ಎಂದು ಶ್ರೀ ಡಾ.ಶಿವಾನಂದ ಸ್ವಾಮೀಜಿ ಒತ್ತಾಯಿಸಿದ್ದರು.

ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ ಮಾಡಿದ್ದನ್ನು ಖಂಡಿಸಿ ಪಟ್ಟಣದಲ್ಲಿ ಶುಕ್ರವಾರ ಶ್ರೀ ವಿಶ್ವಗುರು ಬಸವೇಶ್ವರ ಅಭಿವೃದ್ಧಿ ಟ್ರಸ್ಟ್ನಿಂದ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಮಹಾತ್ಮರನ್ನು ಅವಮಾನಿಸುವವರ ವಿರುದ್ಧ ಕಠಿಣ ಕಾನೂನು ಜಾರಿ ಆಗಬೇಕು. ಆರೋಪಿ ಯಾರೇ ಇದ್ದರೂ ಕಠಿಣ ಶಿಕ್ಷೆ ಆಗಬೇಕು. ಸರ್ಕಾರ ನಿರ್ಲಕ್ಷಿಸಿದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶ್ರೀ ವಿಶ್ವಗುರು ಬಸವೇಶ್ವರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿ, ಕಿಡಿಗೇಡಿಗಳ ಕೃತ್ಯ ಬಸವ ಅನುಯಾಯಿಗಳಿಗೆ ನೋವುಂಟು ಮಾಡಿದೆ. ಭಾವಚಿತ್ರಕ್ಕೆ ಅವಮಾನಿಸಿರುವುದು ಅಕ್ಷಮ್ಯ ಎಂದರು.

ಕಿಡಿಗೇಡಿಗಳನ್ನು ಬಂಧಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಸೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಲಾಯಿತು.
ಜಾಗತಿಕ ಲಿಂಗಾಯತ ಮಹಾಸಭೆ ತಾಲೂಕು ಅಧ್ಯಕ್ಷ ಪ್ರವೀಣ ಕಾಡಾದಿ, ಶಿವಲಿಂಗಯ್ಯ ಕನ್ನಾಡೆ, ಗ್ರಾಪಂ ಸದಸ್ಯ ದೇವಿಂದ್ರ ಭೋಪಳೆ, ಪ್ರಮುಖರಾದ ಲೋಹಿತ ಧರ್ಮಾಣೆ, ಅಂಕುಶ ಭೂಸಾರೆ, ಸಚಿನ್ ಕೌಟೆ, ದಯಾನಂದ ನಿಮಾಣೆ, ಲೋಕೇಶ ಧಬಾಲೆ, ನಾಗೇಶ ನೀಲಂಗೆ, ಕಾಶೀನಾಥ ಕಲಾಲ್, ರಾಜಕುಮಾರ ತೊಂಡಾರೆ, ಪ್ರಜ್ವಲ ಕೋರೆ, ರಾಹುಲ ಗಬಾಳೆ, ಸಂಗಮೇಶ ಬಿರಾದಾರ , ಸಚಿನ ಆದೆಪ್ಪ, ಶಂಕರ ಗೌಡಗಾಂವೆ ಇತರರಿದ್ದರು.