ಕಲಬುರಗಿ:
ಜಿಲ್ಲಾ ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯರನ್ನಾಗಿ ಶಾಸಕ ಎಂ.ವೈ.ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಯುಗಾದಿ ಹಬ್ಬದ ದಿನ ಭಾನುವಾರ ಸಂಜೆ ನಗರದ ಐವಾನ್ ಈ ಶಾಹಿ ಅತಿಥಿಗೃಹದಲ್ಲಿ ನಡೆದ ವೀರಶೈವ ಲಿಂಗಾಯತ ಸಮಾಜದ ಜನಪ್ರತಿನಿಧಿಗಳು, ಮುಖಂಡರು, ಹಿರಿಯರು, ಯುವಕರ ಸಭೆಯಲ್ಲಿ ಒಕ್ಕೋರಲ ರ‍್ನಿಣಯ ಕೈಗೊಳ್ಳಲಾಯಿತು.
ಸಮಾಜದಲ್ಲಿ ಭಿನ್ನಾಭಿಪ್ರಾಯ ಮೂಡಬಾರದು. ಒಗ್ಗಟ್ಟು ಪ್ರರ‍್ಶಿಸಬೇಕು ಎಂಬ ನರ‍್ಧಾರದಂತೆ ಹಿರಿಯ ಮುಖಂಡರ ಪಂಚಕಮಿಟಿಯ ಹಿರಿಯರು ನರ‍್ಧರಿಸಿದಂತೆ ಒಕ್ಕೋರಲ ರ‍್ನಿಣಯ ಕೈಗೊಂಡು ರ‍್ಥಪರ‍್ಣ ಮತ್ತು ಮಾದರಿ ಜಯಂತ್ಯುತ್ಸವವನ್ನು ಆಚರಿಸಲು ನರ‍್ಧರಿಸಲಾಯಿತು.
ಜಯಂತಿಗೆ ಶ್ರೀದಲ್ಲಿ ಎಲ್ಲ ಸಮಿತಿಗಳನ್ನು ರಚಿಸಬೇಕು, ಯಾರ ಬಳಿಯೂ ದೇಣಿಗೆ ಕೇಳುವುದು ಬೇಡ, ಸಮಾಜದ ಹಿರಿಯರು, ಪ್ರಮುಖರೇ ನರ‍್ವಹಣೆ ಮಾಡುವ ಬಗ್ಗೆ ರ‍್ಚಿಸಲಾಯಿತು.
ಒಂದೇ ದಿನ ಬೃಹತ್ ಕರ‍್ಯಕ್ರಮ: ಪ್ರತಿಬಾರಿಯಂತೆ ಪ್ರಸಕ್ತ ರ‍್ಷ ಎರಡು ದಿನ ಜಯಂತ್ಯುತ್ಸವ ಸಮಿತಿಯಿಂದ ಉಪನ್ಯಾಸ, ಒಂದು ದಿನ ರ‍್ಕಾರಿ ಕರ‍್ಯಕ್ರಮ, ಮೆರವಣಿಗೆ ಬದಲಾಗಿ ಪ್ರಸಕ್ತ ರ‍್ಷ ಒಂದೇ ದಿನ ಬೃಹತ್ ಕರ‍್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ. ನಗರದ ಬೃಹತ್ ಮೈದಾನದಲ್ಲಿ ಒಂದು ದಿನ ದೊಡ್ಡ ಕರ‍್ಯಕ್ರಮ ಮಾಡಿ, ಎಲ್ಲ ತಾಲೂಕುಗಳ ಸಮಾಜದ ಬಂಧುಗಳನ್ನು ಸೇರಿಸಿ ವೀರಶೈವ ಲಿಂಗಾಯತರ ಆಚಾರ, ವಿಚಾರಗಳನ್ನು ಜನರಿಗೆ ತಲುಪಿಸುವ ಬಗ್ಗೆ ಚಿಂತನೆ ನಡೆಸಲಾಯಿತು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಶರಣಬಸಪ್ಪ ರ‍್ಶನಾಪುರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಶಾಸಕ ಅಲ್ಲಮ ಪ್ರಭು ಪಾಟೀಲ್, ಮಾಜಿ ಶಾಸಕ ಅಮರನಾಥ ಪಾಟೀಲ್, ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ, ಪ್ರಮುಖರಾದ ಪ್ರಭುಲಿಂಗ ಮಹಾಗಾಂವಕರ, ಆರ್ ಜಿ ಶೆಟಗಾರ, ಅರುಣಕುಮಾರ ಪಾಟೀಲ್, ರವೀಂದ್ರ ಶಾಬಾದಿ, ಡಾ.ಭೀಮಾಶಂಕರ ಬಿಲಗುಂದಿ, ಸುರೇಶ ಸಜ್ಜನ, ರಾಜಾ ಭೀಮಳ್ಳಿ, ಸೋಮಶೇಖರ ಗೋನಾಯಕ, ಸೋಮಶೇಖರ ಹಿರೇಮಠ, ಅಣ್ಣಾರಾವ ಧುತ್ತರಗಾಂವ, ಕಲ್ಯಾಣರಾವ ಪಾಟೀಲ್, ಅರುಣಕುಮಾರ ಪಾಟೀಲ್, ರಾಜಶೇಖರ ಯಂಕಂಚಿ, ಶ್ರೀಶೈಲ ಘೂಳಿ, ಕಲ್ಯಾಣಪ್ಪ ಪಾಟೀಲ್ ಮಳಖೇಡ, ಅಶೋಕ ಘೂಳಿ, ಈರಣ್ಣ ಗುಳೇದ್, ಸಂಗಮೇಶ ನಾಗನಹಳ್ಳಿ, ಬಸವರಾಜ ಶೇರಿಕಾರ, ರೇವಣಸಿದ್ದಯ್ಯ ಮಠ, ಶರಣು ಭೂಸನೂರ, ಶಿವಶರಣಪ್ಪ ದೇಗಾಂವ, ಜಗ್ಗು ದೇಶಮುಖ, ದಯಾನಂದ ಪಾಟೀಲ್ ಸೇರಿ ಬಸವಪರ ಸಂಘಟನೆಯ ಮುಖಂಡರು, ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರು, ಬಸವಾಭಿಮಾನಿಗಳು ಭಾಗವಹಿಸಿದ್ದರು.