ಬಳ್ಳಾರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಡಪಕ್ಷಗಳು ಬುಧವಾರ ಕರೆ ನೀಡಿರುವ ಭಾರತ್ ಬಂದ್ ಗೆ ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜನಜೀವನ ಯಥಾಸ್ಥಿತಿಯಿದೆ.ಎಂದಿನಂತೆ ಸರ್ಕಾರಿ ಬಸ್, ಖಾಸಗಿ ವಾಹನಗಳ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರಿಗೂ ಯಾವುದೇ ತೊಂದರೆಯಾಗಿಲ್ಲ.
ಅಂಗಡಿ ಮುಂಗಟ್ಟುಗಳು ಪ್ರಾರಂಭವಾಗಿವೆ.ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಎಂದಿನಂತೆ ವಿದ್ಯಾರ್ಥಿಗಳು ತೆರಳಿದರು.
ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸರು ನಗರದ ರಾಯಲ್ ಸರ್ಕಲ್, ಮೋತಿ ಸರ್ಕಲ್, ಎಸ್ಪಿ ಸರ್ಕಲ್, ಸುಧಾ ಕ್ರಾಸ್ ಸೇರಿ ವಿವಿಧೆಡೆ ಬಿಡು ಬಿಟ್ಟಿದ್ದು, ಮುಂಚಿತವಾಗಿ ಬಂದ್‌ಗೆ ಸಹಕರಿಸುವಂತೆ ಸಂಘಟನೆ ಮುಖಂಡರು ವ್ಯಾಪಕ ಪ್ರಚಾರ ಕೈಗೊಂಡರೂ ಜನ-ಜೀವನ ಎಂದಿನಂತೆ ಇದೆ.