ಜಿಲ್ಲೆ

ಬಳ್ಳಾರಿ: ಟಿಇಟಿ ಪರೀಕ್ಷೆ ಬರೆದ 8,458 ಅಭ್ಯರ್ಥಿಗಳು

ಬಳ್ಳಾರಿ: ನಗರದ 35 ಪರೀಕ್ಷಾ ಕೇಂದ್ರಗಳಲ್ಲಿ (ಮೊದಲ ಅಧಿವೇಶನದಲ್ಲಿ 15, ಎರಡನೇ ಅಧಿವೇಶನದಲ್ಲಿ 20 ಪರೀಕ್ಷಾ ಕೇಂದ್ರಗಳಲ್ಲಿ) ಭಾನುವಾರ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಸುಗಮವಾಗಿ ನಡೆಯಿತು.

ಬೆಳಗ್ಗೆ ನಡೆದ ಮೊದಲ ಪತ್ರಿಕೆಯ ಪರೀಕ್ಷೆಗೆ ಒಟ್ಟು 4,038 ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಸಿದ್ದರು. ಅದರಲ್ಲಿ 3,557 ಅಭ್ಯರ್ಥಿಗಳು ಹಾಜರಾಗಿದ್ದರು. 481 ವಿದ್ಯಾರ್ಥಿಗಳು ಗೈರಾದ್ದರು.

ಮಧ್ಯಾಹ್ನ 2ರಿಂದ ನಡೆದ ಎರಡನೇ ಪತ್ರಿಕೆಗೆ 5,318 ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಸಿದ್ದರು. ಅದರಲ್ಲಿ 4,901 ಅಭ್ಯರ್ಥಿಗಳು ಹಾಜರಾಗಿದ್ದರು. 417 ಜನ ಗೈರಾಗಿದ್ದರು. ಎಲ್ಲ ಪರೀಕ್ಷಾ ಕೇಂದ್ರಗಳ ಬಳಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಯಾವುದೇ ರೀತಿಯ ಗೊಂದಲಗಳಿಲ್ಲದೆ ಪರೀಕ್ಷೆಗಳು ನಡೆದಿವೆ ಎಂದು ಡಿಡಿಪಿಐ ಹನುಮಕ್ಕ ಅವರು ತಿಳಿಸಿದ್ದಾರೆ.