ಜಿಲ್ಲೆ

ಕೃಷಿ ಹೊಂಡದಲ್ಲಿನ ಮೊಸಳೆ ಸೆರೆ

ಬಳ್ಳಾರಿ : ತಾಲೂಕಿನ ಕುಡುದರಹಾಳ್ ಗ್ರಾಮದ ಪ್ರಸಾದ್ ರಾವ್ ಎಂಬತನ ಕೃಷಿ ಹೊಂಡದಲ್ಲಿ ಪ್ರತ್ಯಕ್ಷವಾದ ಮೊಸಳೆಯನ್ನು ಅರಣ್ಯ ಅಧಿಕಾರಿಗಳು ಶನಿವಾರ ಸೆರೆ ಹಿಡಿದಿದ್ದಾರೆ.

ಮೊಸಳೆಗೆ ಮೂವತ್ತು ವರ್ಷ ವಯಸ್ಸಿದೆ. ಆರವತ್ತು ಕೆ.ಜಿ. ತೂಕವಿದ್ದು , ಆರು ಅಡಿ ಉದ್ದವಿದೆ. ಗ್ರಾಮದ ಬಳಿ ವೇದಾವತಿ ನದಿ ಹರಿಯುತ್ತಿರುವುದರಿಂದ ಅಲ್ಲಿಂದ ಕೃಷಿ ಹೊಂಡಕ್ಕೆ ಕೆಲ ವರ್ಷಗಳ ಹಿಂದಯೇ ಸೇರಿರಬಹುದು ಎನ್ನಲಾಗಿದೆ. ಸದ್ಯ ಸೆರೆ ಹಿಡಿದಿರುವ ಮೊಸಳೆಯನ್ನು ತುಂಗಭದ್ರ ಜಲಾಶಯಕ್ಕೆ ಬಿಡಲಾಗಿದೆ, ಮೊಸಳೆ ಹಿಡಿಯಲು ಸ್ಥಳೀಯ ಮಲ್ಲಯ್ಯನ ಸಹಕಾರವಿತ್ತು ಎಂದು ಅಧಿಕಾರಿಗಳು ತಿಳಿಸಿದರು.