ಬಳ್ಳಾರಿ : ಕೃಷಿ ಜಮೀನೊಂದರ ವಿಷಯವಾಗಿ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಹಾಗೂ ಅವರ ಬೆಂಬಲಿಗರಿಂದ ನನಗೆ ಹಾಗೂ ಕುಟುಂಬಕ್ಕೆ ಪ್ರಾಣ ಬೆದರಿಕೆಯಿದೆ ಎಂದು ಮುದ್ದಾಪುರ ಗ್ರಾಮದ ರೈತ ಕೆ. ಮಧು ಆರೋಪಿಸಿದರು.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸತೀಶ್ ಪರಿಷತ್ ಸದಸ್ಯರಾದ ಮೇಲೆ 66 ಎಕರೆ ಬೇನಾಮಿ ಆಸ್ತಿ ಮಾಡಿದ್ದಾರೆ. ನನ್ನ ಜಮೀನನ್ನೂ ಬೇನಾಮಿಯಾಗಿ ಖರೀದಿಸಲು ಪ್ರಯತ್ನಿಸಿದರು. ಅದನ್ನು ಒಪ್ಪದಿದ್ದಾಗ ನನ್ನ ಮೇಲೆ ದಾಳಿ ಮಾಡಿಸಿದ್ದಾರೆ. ಆದ್ದರಿಂದ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ರಕ್ಷಣೆ ಒದಗಿಸಬೇಕು ಎಂದು ಕೋರಿದರು. ಸತೀಶ್ ಅಧಿಕಾರದಲ್ಲಿರುವುದರಿಂದ ನಮ್ಮ ಕುಟುಂಬಕ್ಕೆ ಜಮೀನು ವಿಷಯದಲ್ಲಿ ಯಾರು ಸಹಾಯ ಮಾಡುತ್ತಿಲ್ಲ. ಆದ್ದರಿಂದ, ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾವುದೇ ವೇದಿಕೆಗೆ ಕರೆದರೂ ಬರಲು ಸಿದ್ದ ಎಂದು ಸವಾಲು ಹಾಕಿದರು. ಜಮೀನಿನ ವಿಚಾರವನ್ನು ಕಾನೂನತ್ಮಕವಾಗಿ ಹೋರಾಟ ನಡೆಸುವೆ ಶಕ್ತಿಯಿದೆ ಎಂದರು. ಸಹೋದರಿ ಮುರಾರಿ ಲಕ್ಷ್ಮೀ, ವಕೀಲ ಟಿ.ರಾಮಾಂಜನೇಯ, ಸಾಮಾಜಿಕ ಹೋರಾಟಗಾರ್ತಿ ಭಾಗ್ಯಲಕ್ಷ್ಲೀ ಇದ್ದರು.