ಗದಗ
ತಾಲೂಕಿನ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರಶರಣರ ಮಠದಲ್ಲಿ ಶನಿವಾರ ಜರುಗಿದ ಚನ್ನವೀರಶರಣರ 28ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಹಾಗೂ ಸಾಮೂಹಿಕ ವಿವಾಹಗಳು ಜರುಗಿದವು.
ಕಾರ್ಯಕ್ರಮದಲ್ಲಿ ಶಿವಶಾಂತವೀರ ಶರಣರು ಮಾತನಾಡಿ, ಶರಣರ ಪುಣ್ಯಸ್ಮರಣೆ ದಿನದಂದು ನಮಗೆಲ್ಲ ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳನ್ನು ಸಂಘಟಿಸಿ ಭಕ್ತರನ್ನು ಅವುಗಳಲ್ಲಿ ತೊಡಗಿಸುವ ಒಂದು ಪ್ರಯತ್ನವಾಗಿದೆ. ಮನುಷ್ಯ ಸುಖಿಯಾಗಿರಲು ಸತ್ಪುರುಷರ ಸ್ಮರಣೆಯಲ್ಲಿ ಜೀವನ ಕಳೆಯಬೇಕು. ಶರಣರ ದೃಷ್ಠಿಯಲ್ಲಿ ಸಂತೃಪ್ತಿ ಭಾವನೆ ಹೊಂದುವುದೇ ಶಾಶ್ವತವಾಗಿದೆ. ಸಂತರ ಆರಾಧನೆ, ಸ್ಮರಣೆ, ತನ್ಮೂಲಕ ಸನ್ಮಾರ್ಗದಲ್ಲಿ ನಡೆಯುವ ಮಾರ್ಗವನ್ನು ನಾವು ಕಂಡುಕೊಳ್ಳಬೇಕು. ಕೇವಲ ಹುಟ್ಟು-ಸಾವಿಗೆ ಸೀಮಿತವಾಗದೆ ಉತ್ತಮ ಚಟುವಟಿಕೆಗಳ ಮೂಲಕ ಜೀವನದ ಸಾರ್ಥಕತೆ ಹೆಚ್ಚಿಸಿಕೊಳ್ಳಬೇಕೆಂದರು.
ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಚಿಕ್ಕೇನಕೊಪ್ಪದ ಚನ್ನವೀರಶರಣರ ಚರಿತ್ರೆಯ ಪುರುಷರಾಗಿದ್ದಾರೆ. ಆಶ್ರಮದ ಏಳ್ಗೆಗಾಗಿ ಜೋಳಿಗೆ ಹಿಡಿದು ಧನ ಸಂಗ್ರಹಿಸಿ ಕೊಟ್ಟಿರುವ ಶ್ರೀಗಳಾಗಿದ್ದಾರೆ. ನುಡಿದಂತೆ ನಡೆದು, ನಡೆದಂತೆ ನುಡಿದವರು. ಆಶ್ರಮದ ಕಲಾವಿದರ ಬಗ್ಗೆ, ವಿದ್ಯಾಥರ್ಿಗಳ ಬಗ್ಗೆ ಅಪಾರ ಪ್ರೇಮ ಹೊಂದಿದ್ದರು ಎಂದರು
ಸಾಮೂಹಿಕ ವಿವಾಹ ಕುರಿತು ಮಾತನಾಡಿದ ಕಲ್ಲಯ್ಯಜ್ಜನವರ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಸಾಮೂಹಿಕ ವಿವಾಹವು ಸಮಾಜಕ್ಕೆ ವರದಾನ ಇದ್ದಂತೆ. ಇದರ ಸದುಪಯೋಗ ಪಡೆದ ದಂಪತಿಗಳು ಪಾಲಕರು ಪುನಃ ಸಮಾಜಕ್ಕೆ ಸೇವೆ ಸಲ್ಲಿಸುವ ಕಾರ್ಯ ಮಾಡಬೇಕು. ಅಂಧ, ಅನಾಥ, ಮಕ್ಕಳಿದ್ದಲ್ಲಿ ವಿರೇಶ್ವರ ಪುಣ್ಯಾಶ್ರಮಕ್ಕಾಗಲಿ ಅಥವಾ ಹುಬ್ಬಳ್ಳಿಯಲ್ಲಿಯ ಶರಣರ ಅಂಧರ ಆಶ್ರಮಕ್ಕಾಗಲಿ ಕಳುಹಿಸಲು ತಿಳಿಸಿದರು.
ವಿರಕ್ತಮಠದ ಡಾ. ಚನ್ನಮಲ್ಲ ಶ್ರೀಗಳು, ಭಕ್ತರ ಬಗ್ಗೆ ಶಾಂತವೀರ ಶರಣರ ಚಿಂತನೆ, ಗುರುಗಳಲ್ಲಿ ಅವರ ಭಕ್ತಿಯ ಪರಾಕಾಷ್ಟತೆಯನ್ನು ನೋಡುವುದು ಒಂದು ವಿಶೇಷ ಎನ್ನಬಹುದು. ಅವರ ತ್ಯಾಗದ ಬದುಕು ನಮಗೆಲ್ಲ ಅನುಕರಣೀಯ. ಅವರ ಜೀವನದ ಆದರ್ಶಗಳನ್ನು ಅಳವಡಿಸಿಕೊಂಡು ಭಕ್ತರು ಪುನೀತರಾಗಬೇಕು ಎಂದರು.
ಉಮೇಶಗೌಡ ಪಾಟೀಲ ಮಾತನಾಡಿ, 12ನೇ ಶತಮಾನದ ಸಾಮಾಜಿಕ ಕಳಕಳಿ ಮತ್ತು ದಾಸೋಹ, ಸಮಾನತೆ ತತ್ವವನ್ನು ನಾವು ಶರಣರ ಜೀವನದಲ್ಲಿ ಕಾಣುತ್ತೇವೆ. ಶರಣರ ಸನ್ಮಾರ್ಗದಲ್ಲಿ ಈಗಿನ ಪೂಜ್ಯ ಶಿವಶಾಂತವೀರ ಶರಣರು ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಮಠದಲ್ಲಿ ಜರುಗುವ ಧಾಮರ್ಿಕ ಕಾರ್ಯಕ್ರಮಗಳು, ಶಿಕ್ಷಣ ಪ್ರಸಾರ, ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ಮೊದಲಾದ ಜನಕಲ್ಯಾಣ ಕಾರ್ಯಗಳ ಮೂಲಕ ಶ್ರೀಗಳು ಭಕ್ತ ಹಿತಚಿಂತನೆ ಮಾಡುತ್ತಿರುವರು ಎಂದರು.
ಸಾಹಿತಿ ಅಂದಾನಪ್ಪ ವಿಭೂತಿ ರಚಿತ ಶರಣು ಶರಣಾಥರ್ಿ', ಸುಮಂಗಲಾ ಶಂಕರಗೌಡ ಪಾಟೀಲ ರಚಿತಶರಣರು ಈ ಜಗದ ಬೆಳಕು' ಢವಳೇಶ್ವರದ ನಿವೃತ್ತ ಶಿಕ್ಷಕ ಬಿ. ತ. ಗುಂಡ್ಲಮನಿ ರಚಿತ `ಮುಕ್ತಿ ಸೋಪಾನಗಳು' ಗ್ರಂಥಗಳನ್ನು ಲೋಕಾರ್ಪಣೆ ಗೊಳಿಸಲಾಯಿತು.
ಶರಣರ ಬಳಗ ಹಾಗೂ ಜಾತ್ರಾ ಮಹೋತ್ಸವ ಸಮಿತಿ, ಐಎಂಎ, ಆರೋಗ್ಯ ಇಲಾಖೆ ಸಹಯೋಗದಲ್ಲಿ ರಕ್ತದಾನ ಶಿಬಿರ ಜರುಗಿತು. ಕೊಣ್ಣೂರಿನ ಜೈ ಕಿಸಾನ್ ಕಲಾತಂಡದಿಂದ ಜನಪದೋತ್ಸವ, ಕಲಾವಿದ ಬಸವರಾಜ ಬಂಟನೂರ ಅವರಿಂದ ಸಂಗೀತ ಸೇವೆ ಜರುಗಿತು.
ಶ್ರೀಶೈಲ ಶಾಖಾಮಠದ ಪಂಡಿತಾರಾಧ್ಯ ಶ್ರೀಗಳು, ಹೆಬ್ಬಾಳದ ಶಿವಪ್ರಕಾಶ ಶರಣರು ವೇದಿಕೆ ಮೇಲೆಉಪಸ್ಥಿತರಿದ್ದರು. ಶಿವಲಿಂಗಶಾಸ್ತ್ರಿ ಸಿದ್ದಾಪೂರ, ಬಿ. ವೈ. ಡೊಳ್ಳಿನ, ಶಿವಶರಣಗೌಡ ಯರಡೋಣಿ ಇತರರು ಇದ್ದರು.