ಚಿತ್ರದುರ್ಗ:ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಿರ್ಮಿಸಿರುವ ಶೌಚ ಗೃಹ ಈ ವರೆಗೂ ವಿದ್ಯಾರ್ಥಿಗಳ ಬಳಕೆಗೆ ಅವಕಾಶವಿಲ್ಲದಂತಾಗಿದೆ. ಶೌಚಗೃಹದ ಕಾಮಗಾರಿ ಪೂರ್ಣಗೊಂಡಿಲ್ಲ.
ನೀರಿನ ಕೊರತೆಯಿಂದ ಕಾಲೇ ಜಿನಲ್ಲಿರುವ ಇತರೆ ಶೌಚಗೃಹಗಳು ನೀರಿನ ಕೊರತೆಯಿಂದ ಬಳಕೆ ಸಿಗುತ್ತಿಲ್ಲವೆಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ.ಎ ಚ್.ಕೆ.ಎಸ್.ಸ್ವಾಮಿ ದೂರಿದ್ದಾರೆ.
ಲಕ್ಷಾಂತರ ರೂ.ವೆಚ್ಚದಲ್ಲಿ ಶೌಚಗೃಹಗಳನ್ನು ನಿರ್ಮಿಸಲಾಗಿದೆ. ಶೌಚಗೃಹದ ಕಟ್ಟಡ ನಿರ್ಮಿಸುವುದರೊಂದಿಗೆ ಅದಕ್ಕೆ ನೀರಿನ ಪೂರೈಕೆ, ಸ್ವಚ್ಛತೆಗೂ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳ ಬೇಕು.ಶೌಚಗೃಹಗಳ ಬಳಸದೇ ಕಾರಣಕ್ಕೆ ಅವುಗಳು ಶಿಥಿಲವಾಗುತ್ತಿವೆ. ಹೊಸ ನೀರಿನ ತೊಟ್ಟಿ ಕಾಮಗಾರಿ ಕೂಡ ಪೂರ್ಣಗೊಂಡಿಲ್ಲ.