ನಾಪೋಕ್ಲು: ಬಲ್ಲಮಾವಟಿ ಗ್ರಾಮಕ್ಕೆ ಗುರುವಾರ ಆಗಮಿಸಿದ ಮುದ್ದಂಡ ಕುಟುಂಬಸ್ಥರು ಆಯೋಜಿಸರುವ 25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಕ್ರೀಡಾ ಜ್ಯೋತಿಯನ್ನು ಬಲ್ಲಮಾವಟಿ ಗ್ರಾಮದ ಕೂಡು ರಸ್ತೆಯಲ್ಲಿ ತಳಿಯಕ್ಕಿ ಬೊಳಕ್ ದುಡಿಕೊಟ್ಟು ಪಾಟಿನೊಂದಿಗೆ ಅಪ್ಪಚೆಟ್ಟೋಳಂಡ ಕುಟುಂಬದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹಾಗೂ ಗ್ರಾಮಸ್ಥರು ಮುದ್ದಂಡ ಹಾಕಿ ಟೂರ್ನಿಯ ಮೆರತಾನ್ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿದರು.
ಅಪ್ಪಚೆಟ್ಟೋಳಂಡ ಕುಟುಂಬ ಉಪಾಧ್ಯಕ್ಷ ರಾಜಾ ಭೀಮಯ್ಯ, ಖಜಾಂಜಿ ನವೀನ್, ಕಾರ್ಯದರ್ಶಿ ರೀನಾ ಪೂವಯ್ಯ, ಬಲ್ಲಮಾವಟಿ ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಮೂವೇರಾ ನಾನಪ್ಪಾ, ಗ್ರಾ.ಪಂ.ಉಪ ಅಧ್ಯಕ್ಷರ ಚೋಕಿರ ಬಾಬಿ ಭೀಮಯ್ಯ, ನಾಲ್ನಾನಡ್ ಹಾಕಿ ಕ್ಲಬ್ಬಿನ ಅಧ್ಯಕ್ಷ ಕರವಂಡ ಸುರೇಶ್,ಕೊಡವಾ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕುಕ್ಕೆರ ಜಯ ಚಿನ್ನಪ್ಪ, ಬಡಕಡ ದೀನಾ ಪುವಯ್ಯ , ಮುದ್ದಂಡ ರಾಯ್ ತಮ್ಮಯ್ಯ ಸೇರಿದಂತೆ ವಿವಿಧ ಕುಟುಂಬಗಳ ಹಿರಿಯರು, ಕ್ರೀಡಾಪಟುಗಳು,ಗ್ರಾಮಸ್ಥರು ಪಾಲ್ಗೊಂಡಿದ್ದರು.