ತಿಪಟೂರು: ಟೀ ಅಂಗಡಿ ಪ್ರಾರಂಭಿಸುವ ಉತ್ಸಾಹದಲ್ಲಿ ಅಂಗಡಿಗೆ ಬಲ್ಬ್ ಹಾಕಲು ಹೋದ ವ್ಯಕ್ತಿ ವಿದ್ಯುತ್ ಶಾಕ್ಗೆ ಬಲಿಯಾಗಿದ್ದಾನೆ. ನಗರದ ದೊಡ್ಡಯ್ಯನಪಾಳ್ಯದ ನಿವಾಸಿ ಸುರೇಶ್(42) ಮೃತ, ತಮ್ಮ ಮನೆ ಮುಂಭಾಗದಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಕಾಫಿ-, ಟೀ ವ್ಯಾಪಾರ ಪ್ರಾರಂಭಿಸುವ ಸಿದ್ಧತೆ ನಡೆಸಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಸೋಮವಾರ ಬೆಳಗ್ಗೆ ಕಾಫಿ-, ಟೀ ವ್ಯಾಪಾರ ಪ್ರಾರಂಭಿಸಬೇಕಿತ್ತು. ಅಂಗಡಿ ಪ್ರಾರಂಭದ ಸಿದ್ಧತೆ ನಡೆಸಿದ್ದ ಸುರೇಶ್, ಭಾನುವಾರ ರಾತ್ರಿ ಅಂಗಡಿಗೆ ವಿದ್ಯುತ್ ಬಲ್ಬ್ ಅಳವಡಿಸಲು ಹೋದಾಗ ವಿದ್ಯುತ್ ಶಾಕ್ಗೆ ಒಳಗಾಗಿ ಮೃತಪಟ್ಟಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸುರೇಶ್ ತಾಲೂಕಿನ ಮಲ್ಲಿಗೆರೆಯ ಅಶ್ವಿನಿ ಜತೆ ವಿವಾಹವಾಗಿ ಏ.21 ಕ್ಕೆ ಸರಿಯಾಗಿ ಎರಡು ತಿಂಗಳಾಗಿದೆ ಎನ್ನಲಾಗಿದೆ.