ಕಲಬುರಗಿ: ಬಲಿಷ್ಠ ರಾಷ್ಟç ನಿರ್ಮಾಣಕ್ಕೆ ಬಲಿಷ್ಠ ಯುವಕರು, ನಾಗರಿಕರು ತಯಾರಾಗಬೇಕು. ಶಾಲೆಯಲ್ಲಿ ಶಿಕ್ಷಕರು, ಮಕ್ಕಳಿಗೆ ನೀಡುವ ಉತ್ತಮ ಶಿಕ್ಷಣ, ಮೌಲ್ಯಗಳಿಂದ ಸಾಧ್ಯವಾಗುತ್ತದೆ ಎಂದು ಕಿರಣಕುಮಾರ ಶೆಟಕಾರ ಹೇಳಿದರು.
ತಿಲಕ್ ನಗರದಲ್ಲಿನ ಚಂದ್ರಕಾAತ ಪಾಟೀಲ್ ಪಬ್ಲಿಕ್ ಶಾಲೆಯಲ್ಲಿ (ಸಿಬಿಎಸ್‌ಇ)ಯಲ್ಲಿ ಶನಿವಾರ ಏರ್ಪಡಿಸಿದ್ದ ಕಿರಿಯ ಮಕ್ಕಳ ವಾರ್ಷಿಕ ಕ್ರೀಡಾಕೂಟದಲ್ಲಿ ಮಾತನಾಡಿ, ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದರು.
ಸಂಸ್ಥೆ ಅಧ್ಯಕ್ಷ, ವಿಧಾನ ಪರಿಷತ್ ಡಾ.ಬಿ.ಜಿ.ಪಾಟೀಲ್ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಶಿಕ್ಷಣದ ಪ್ರಗತಿಗೆ ಎಲ್ಲ ಉತ್ಕೃಷ್ಟ ದರ್ಜೆಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.
ಪ್ರಾಂಶುಪಾಲ ಕಿರಣಕುಮಾರ ಕುಲಕರ್ಣಿ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಒಳ್ಳೆಯ ಆಟದ ಮೈದಾನ, ಪ್ರತಿ ತರಗತಿಯಲ್ಲಿ ಮಕ್ಕಳಿಗೆ ಸೆನ್ಸಸ್ ಬೋರ್ಡ್ (ಇಂರ‍್ಯಾಕ್ಟಿವ್ ಪ್ಯಾನಲ್ ಬೋರ್ಡ್) ಅಳವಡಿಸಲಾಗಿದೆ. ಎಲ್ಲ ಶಿP್ಷÀಕ ಸಮೂಹದವರೊಂದಿಗೆ ಶ್ರಮವಹಿಸಿ ಆಧುನೀಕರಣದ ಶಿP್ಷÀಣ ನೀಡಲಾಗುತ್ತಿದೆ ಎಂದರು.
ಹಾಕಿ ಆಟಗಾರ ಮೇಜರ್‌ಧ್ಯಾನ್‌ಚಂದ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕ್ರೀಡಾ ಧ್ವಜಾರೋಹಣ ನೆರವೇರಿಸಲಾಯಿತು. ಕ್ರೀಡಾ ಜ್ಯೋತಿ ಸ್ವೀಕರಿಸಿ, ಪಾರಿವಾಳ ಹಾರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಿರಿಯ ವಿದ್ಯಾರ್ಥಿಗಳು ಪ್ರಾರ್ಥನೆ, ಆಕರ್ಷಕ ಪಥ ಸಂಚಲನ, ಕೋಲಾಟ ಮತ್ತು ನೃತ್ಯ ಗಮನ ಸೆಳೆಯಿತು. ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಆಟಗಳನ್ನಾಡಿಸಿ, ವಿಜೇತರಿಗೆ ಪುರಸ್ಕಾರ ಪತ್ರ ಮತ್ತು ಪದಕಗಳನ್ನು ನೀಡಲಾಯಿತು.