ಜಿಲ್ಲೆ

ಬಲಿಷ್ಠ ದೇಶಕ್ಕಾಗಿ ಮತಯಾಚನೆ ಮಾಡಿ

ಚಿಂಚೋಳಿ: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿಸುವ ದೇಶದ್ರೋಹಿ ಸರ್ಕಾರವನ್ನು ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದ್ದು, ಸುಭದ್ರ ದೇಶಕ್ಕಾಗಿ ನರೇಂದ್ರ ಮೋದಿ ಅವರಿಗಾಗಿ ಮತಯಾಚಿಸಬೇಕು ಎಂದು ವಿಧಾನಸಭೆ ಪ್ರತಿ ಪಕ್ಷ ನಾಯಕ ಆರ್.ಅಶೋಕ ಮನವಿ ಮಾಡಿದರು.

ಪಟ್ಟಣದ ಚಂದಾಪುರದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ಉತ್ತಮ ಮಳೆ, ಬೆಳೆ ಆಗುತ್ತಿತ್ತು. ಪ್ರಸ್ತುತ ಸಿದ್ದರಾಮಯ್ಯ ಸರ್ಕಾರದಲ್ಲಿ ಬರ, ನೀರಿಗಾಗಿ ಹಾಹಾಕಾರವಿದೆ. ಕಾಂಗ್ರೆಸ್ ರಾಜ್ಯಕ್ಕೆ ದೋಷ ಎಂದು ಹರಿಹಾಯ್ದರು.

ರಾಜ್ಯ ಸರ್ಕಾರ ಬರ ಪರಿಹಾರ, ನೀರು, ಮೇವು ಕೊಡಬೇಕು. ಸರ್ಕಾರದ ಹಣ ಖಾಲಿಯಾಗಿದೆ. ೬೦ ಸಾವಿರ ಕೋಟಿ ರೂ. ಎಲ್ಲಿಂದ ಬಂದಿತ್ತು ಹೇಳಬೇಕು. ಗ್ಯಾರಂಟಿ ಸುಲಿಗೆ ಯೋಜನೆಯಾಗಿದೆ. ಲೋಕಸಭೆ ಚುನಾವಣೆ ನಂತರ ರಾಜ್ಯ ಸರ್ಕಾರ ಉಳಿಯಲ್ಲ. ಬೀದರ್‌ನಿಂದ ಮತ್ತೊಮ್ಮೆ ಖೂಬಾ ಗೆಲ್ಲಿಸಿ, ಮೋದಿಗೆ ಬಲ ನೀಡಿ ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಡಾ.ಅವಿನಾಶ ಜಾಧವ್, ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ್, ಪ್ರಮುಖರಾದ ಅಮರನಾಥ ಪಾಟೀಲ್, ಶಿವರಾಜ ಪಾಟೀಲ್ ರz್ದÉÃವಾಡಗಿ, ಶರಣಪ್ಪ ತಳವಾರ, ಆನಂದ ಸಾವಳೆ, ಈಶ್ವರಸಿಂಗ ಠಾಕೂರ, ಶಶಿಕಲಾ ಟೆಂಗಳಿ, ಜಗನ್ನಾಥ ಪಾಟೀಲ್, ವಿಯಜಕುಮಾರ ಚೆಂಗಟಾ, ಸಂತೋಷ ಗಡಂತಿ, ರವಿರಾಜ ಕೊರವಿ, ಗೌತಮ ಪಾಟೀಲ್, ಶಶಿಧರ ಸೂಗೂರ, ಮಲ್ಲಿನಾಥ ಪಾಟೀಲ್, ಗೋಪಾಲರಾವ ಕಟ್ಟಿಮನಿ, ಜಗದೀಶಸಿಂಗ್ ಠಾಕೂರ, ಶ್ರೀಮಂತ ಕಟ್ಟಿಮನಿ, ಮೋತಿರಾಮ ನಾಯಕ, ಅಶೋಕ ಜಾಜಿ, ರಾಜು ಪವಾರ, ಕೆ.ಎಂ.ಬಾರಿ, ಗಿರಿರಾಜ ನಾಟೀಕಾರ, ಸೂರ್ಯಕಾಂತ ಹುಲಜೆ, ಅಭಿಷೇಕ ಮಲಕನೂರ ಇತರರಿದ್ದರು.