ಕಂಪ್ಲಿ: ಬಲಿಜ ಸಮುದಾಯದವರಿಗೆ ಉದ್ಯೋಗಕ್ಕಾಗಿ 2ಎ ಮೀಸಲು ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಬಲಿಜ ಸಂಘದ ನಗರ ಘಟಕದ ಉಪಾಧ್ಯಕ್ಷ ಆರ್.ತಿರುಮಲದೇವರಾಯ ಒತ್ತಾಯಿಸಿದರು.
ಪಟ್ಟಣದ ತಹಸಿಲ್ ಸಭಾಂಗಣದಲ್ಲಿ ಯೋಗಿ ನಾರೇಯಣ ಯತೀಂದ್ರರ ಜಯಂತ್ಯುತ್ಸವದಲ್ಲಿ ಶುಕ್ರವಾರ ಮಾತನಾಡಿದರು. ಬಲಿಜರು ನಾನಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಈ ಹಿನ್ನೆಲೆಯಲ್ಲಿ 2ಎ ಮೀಸಲು ಒದಗಿಸಬೇಕು. ಪಟ್ಟಣದಲ್ಲಿ ಬಲಿಜ ಸಮುದಾಯದ ರುದ್ರಭೂಮಿಗಾಗಿ ತಾಲೂಕು ಆಡಳಿತ ಜಮೀನು ಒದಗಿಸಬೇಕು. ಪಟ್ಟಣದ ರಸ್ತೆ, ವೃತ್ತಕ್ಕೆ ಯೋಗಿ ನಾರೇಯಣ ಯತೀಂದ್ರರ ಹೆಸರನ್ನು ಇಡುವ ಮೂಲಕ ಅವರ ತತ್ವ, ಆದರ್ಶಗಳನ್ನು ಜನರಲ್ಲಿ ಪ್ರೇರೇಪಿಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಎಸ್.ಶಿವರಾಜ ಮಾತನಾಡಿ, ಯೋಗಿ ನಾರೇಯಣ ಯತೀಂದ್ರರ ತತ್ವ, ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಿಸರ ಪ್ರಜ್ಞೆ, ಸಮಗ್ರತೆ, ಭಾವೈಕ್ಯ, ಜಾತ್ಯತೀತತೆ ಮೊದಲಾದ ಮಾನವೀಯ ಗುಣಗಳು ಆದರ್ಶವಾಗಿವೆ ಎಂದರು.
ಬಲಿಜ ಮಹಿಳಾ ಸಂಘದ ನಗರ ಘಟಕದ ಅಧ್ಯಕ್ಷೆ ಶಾರದಮ್ಮ ಶ್ರೀನಿವಾಸ್, ಪದಾಧಿಕಾರಿಗಳಾದ ರೂಪಕಲಾ, ಸುನಂದಮ್ಮ, ಆರತಿ ಸಾವಿತ್ರಮ್ಮ, ಪದ್ಮಾವತೆಮ್ಮ, ಸುನಂದಮ್ಮ, ಇಂಗಳಗಿ ನಾರಾಯಣ, ಬಿ.ಗೋಪಾಲಪ್ಪ, ಹಾದಿಮನಿ ಕಾಳಿಂಗವರ್ಧನ, ಡಿ.ಶ್ರೀನಿವಾಸ್, ಕೆ.ಶಿವಕುಮಾರ್, ಕೆ.ಅನಿಲ್, ತಾಲೂಕು ಅಧ್ಯಕ್ಷ ಬಿ.ನಾಗಭೂಷಣ, ಪದಾಧಿಕಾರಿಗಳಾದ ಎಸ್.ಪ್ರಕಾಶ, ವಿಜಯಕುಮಾರ್, ವಿ.ಕಾರ್ತೀಕ್ ಇತರರಿದ್ದರು.