ಕಮಲಾಪುರ: ಬೋಧನೆ ಹಾಗೂ ಪ್ರಾಯೋಗಿಕ ಚಟುವಟಿಕೆಗೆ ಸಾಕಷ್ಟು ವ್ಯತ್ಯಾಸವಿದೆ. ಕಾರ್ಯಾಗಾರಗಳು ವಿದ್ಯಾರ್ಥಿಗಳ ಬರವಣಿಗೆ ಕೌಶಲ ಹೆಚ್ಚಿಸುವ ಜತೆಗೆ ಜ್ಞಾನ ಮಟ್ಟವನ್ನು ವೃದ್ಧಿಸುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕಿ ಶೈಲಜಾ ಕೊಪ್ಪರ ಅಭಿಪ್ರಾಯಪಟ್ಟರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಾಜೆಕ್ಟ್ ವರ್ಕ್ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರಾಜೆಕ್ಟ್ ವರ್ಕ್ ವಿದ್ಯಾರ್ಥಿಗಳ ಜ್ಞಾನವನ್ನು ಪರೀಕ್ಷಿಸುವುದಾಗಿದೆ. ಇದರಿಂದ ಆಯಾ ವಿಷಯದ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ. ಯುವಕರು ದುಶ್ಚಟಗಳಿಂದ ದೂರವಿದ್ದು, ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಡಾ.ಮಲ್ಲೇಶಪ್ಪ ಕುಂಬಾರ, ಪ್ರಾಚಾರ್ಯೆ ಡಾ.ಅಮೃತಾ ಖಟಕೆ ಮಾತನಾಡಿದರು. ಪ್ರಮುಖರಾದ ಡಾ.ನೀತಾ ಬೋಸ್ಲೆ, ಡಾ.ರವೀಂದ್ರ ಕುಂಬಾರ, ಡಾ.ನಿವೇದಿತಾ ಸ್ವಾಮಿ, ಸವಿತಾ ಪಾಟೀಲ್, ಡಾ.ರಮೇಶ ಪೋತೆ, ಡಾ.ಜಗದೇವಪ್ಪ ಡಿ., ಡಾ.ಜ್ಯೋತಿ ಹೊನ್ನಕಿರಣಗಿ, ಸಫೀಯಾ ಬೇಗಂ, ಮಹಾಂತೇಶ ಎಸ್., ಡಾ.ಅವಿನಾಶ ಕಂಟಿಕರ, ಡಾ.ಶಿವಲೀಲಾ ಬಸವರಾಜ ಇತರರಿದ್ದರು.
ಪ್ರೊ.ಶಾಂತಾ ಅಷ್ಟಗಿ ಸ್ವಾಗತಿಸಿದರು. ಡಾ.ಮಹ್ಮದ್ ಯೂನುಸ್ ಪ್ರಾಸ್ತಾವಿಕ ಮಾತನಾಡಿದರು. ಡಾ.ಜಗನ್ನಾಥ ತಳವಾರ ನಿರೂಪಣೆ ಮಾಡಿದರು.