ಜಿಲ್ಲೆ

ಬರದಲ್ಲೂ ಸಂಸದರ ರಾಜಕೀಯ- ಕಲ್ಲೇಶರಾಜ್ ಪಟೇಲ್ ಟೀಕೆ

ದಾವಣಗೆರೆ: ಬರ ಅಧ್ಯಯನ ವಿಚಾರದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಕಲ್ಲೇಶರಾಜ್ ಪಟೇಲ್ ಟೀಕಿಸಿದರು. ಕೇಂದ್ರ ಸರ್ಕಾರದ ಜಲ ಆಯೋಗದ ನಿರ್ದೇಶಕ ಅಶೋಕ್‌ಕುಮಾರ್ ನೇತೃತ್ವದ ತಂಡ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿ ರಾಜ್ಯ- ಕೇಂದ್ರ ಸರ್ಕಾರಕ್ಕೆ ಮಾಹಿತಿ ಸಲ್ಲಿಸಿದೆ. ಆಗ ಅವರೊಂದಿಗೆ ರೈತರ ಜಮೀನುಗಳಿಗೆ ತೆರಳದೆ ನಿರ್ಲಕ್ಷಿಸಿದ್ದ ಸಂಸದರು ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಬರ ಅಧ್ಯಯನ ನಡೆಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಂಸದರು ಅಧ್ಯಯನ ಪ್ರವಾಸ ಕೈಬಿಟ್ಟು ಬರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ರಾಜ್ಯಕ್ಕೆ ಬರ ಪರಿಹಾರದ ಹಣ ಬಿಡುಗಡೆ ಮಾಡಿಸಲು ಪ್ರಯತ್ನಿಸಲಿ ಎಂದು ಆಗ್ರಹಿಸಿದರು. ಮುಂಬರುವ ಲೋಕಸಭೆ ಚುನಾವಣೆಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಥವಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಅವರು ಸ್ಪರ್ಧಿಸದಿದ್ದಲ್ಲಿ ತಾವು ಪ್ರಯತ್ನ ನಡೆಸುವ ಇರಾದೆಯಲ್ಲಿದ್ದೇನೆ ಎಂದರು. --------