ಚಿತ್ರದುರ್ಗ: ನಗರದೇವತೆ ಬರಗೇರಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಐತಿಹಾಸಿಕ ಚಂದ್ರವಳ್ಳಿಯಲ್ಲಿ ಬುಧವಾರ ಅನೇಕ ಭಕ್ತರ ಸಮ್ಮುಖದಲ್ಲಿ ಗಂಗಾಪೂಜೆ, ಕುಂಭಾಭಿಷೇಕ ಸಂಭ್ರಮದಿಂದ ನೆರವೇರಿತು.
ನಂತರ ಅಲ್ಲಿಂದ 2 ಕಿ.ಮೀ. ದೂರದಲ್ಲಿರುವ ದೇಗುಲದವರೆಗೂ ದೇವಿಯ ಉತ್ಸವ ಮೂರ್ತಿಯನ್ನು ಮಡಿ ಹಾಸಿನ ಮೇಲೆ ಕರೆ ತರಲಾಯಿತು.
ನೆರೆದಿದ್ದ ಭಕ್ತರಿಗೆ ಹೊಳಲ್ಕೆರೆ ರಸ್ತೆಯ ದೇವಿ ಮೂಲ ದೇಗುಲದ ಸಮೀಪ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾತ್ರಿ ತಾಲೂಕಿನ ಈರಜ್ಜನಹಟ್ಟಿ ಹಾಗೂ ನಾಯಕರ ಸೊಲ್ಲಾಪುರ ಸೇರಿ ನಗರ ವ್ಯಾಪ್ತಿಯ ಭಕ್ತರಿಂದಲೂ ಪೂಜೆ ಸ್ವೀಕಾರ, ಮಹಾ ಮಂಗಳಾರತಿ ಕಾರ್ಯಕ್ರಮ ಜರುಗಿತು.
ನಗರದೇವತೆ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿಯ ಜಲ್ದಿ ಪೂಜೆ ಮಹೋತ್ಸವ ಜಾತ್ರಾ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನೆರವೇರಿತು.