ಜಿಲ್ಲೆ

ಬರಗೇರಮ್ಮ ದೇವಿಗೆ ಕಂಕಣಧಾರಣೆ ಪೂಜೆ

ಚಿತ್ರದುರ್ಗ: ಕೋಟೆನಗರಿಯ ನವದುರ್ಗೆಯರ ಪೈಕಿ ಅಕ್ಕ-ತಂಗಿಯರ ಜಾತ್ರೆ ವೇಳೆ ಸಂಪ್ರದಾಯದಂತೆ ಹಿರಿಯಕ್ಕನಿಗಿಂತ ಮುಂಚಿತವಾಗಿ ಬರಗೇರಮ್ಮ ಮತ್ತು ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿಯರ ಕಂಕಣಧಾರಣೆ, ಮದುವಣಗಿತ್ತಿ ಪೂಜಾ ಕಾರ್ಯಕ್ರಮ ಶುಕ್ರವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಗರ್ಭಗುಡಿಯಲ್ಲಿನ ಬರಗೇರಮ್ಮ ದೇವಿಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಸೇವೆ, ಪೂಜೆ ನೆರವೇರಿತು. ಮಹಾಮಂಗಳಾರತಿ ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.