ಔರಾದ್: ಬರ ಘೋಷಣೆಯಲ್ಲಿ ಔರಾದ್ ಮತ್ತು ಕಮಲನಗರ ತಾಲೂಕಿನ ರೈತರಿಗೆ ತಾರತಮ್ಯ ಮಾಡಲಾಗಿದ್ದು, ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು ಎಂದು ತಾಲೂಕಿನ ರೈತ ಮುಖಂಡರು ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಶ್ರೀಮಂತ ಬಿರಾದಾರ ಮಾತನಾಡಿ, ಪಕ್ಕದ ಭಾಲ್ಕಿ ತಾಲೂಕು ಬರ ಪೀಡಿತ ಘೋಷಿಸಿದ್ದು, ಅತ್ಯಂತ ಬರ ಪರಿಸ್ಥಿತಿ ಇರುವ ಔರಾದ್, ಕಮಲನಗರ ಘೋಷಿಸದೇ ಅನ್ಯಾಯ ಮಾಡಲಾಗಿದೆ. ಎರಡು ತಾಲೂಕು ಬರ ಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಪ್ರವೀಣ ಕುಲಕರ್ಣಿ ಮಾತನಾಡಿ, ಸರ್ಕಾರ ತಾರತಮ್ಯ ನೀತಿ ಅನುಸರಿಸದೆ, ಎಲ್ಲ ರೈತರ ನೆರವಿಗೆ ಬರಬೇಕು. ತP್ಷÀಣ ಎರಡು ತಾಲೂಕು ಬರ ಎಂದು ಘೋಷಿಸಬೇಕು, ಎಕರೆಗೆ ೫೦ ಸಾವಿರ ಪರಿಹಾರ ನೀಡಬೇಕು. ನಿರಂತರ ವಿದ್ಯುತ್ ಕೊಡಬೇಕು, ಕೃಷಿ ಕಾಯ್ದೆ ರದ್ದು ಮಾಡಬೇಕು. ಜಮೀನುಗಳಿಗೆ ರಾತ್ರಿ ವಿದ್ಯುತ್ ಕೊಡಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಲಾಯಿತು. ರೈತ ಮುಖಂಡ ಪ್ರಕಾಶ ಬಾವುಗೆ, ಗೋವಿಂದ ಇಂಗಳೆ, ಝರಣಪ್ಪ ದೇಶಮುಖ, ಕಲ್ಲಪ್ಪ ದೇಶಮುಖ, ಬಸವರಾಜ ಮುಳೆ, ಸತ್ಯವಾನ ಪಾಟೀಲ್, ಗೋವಿಂದ ಪಾಟೀಲ್, ರಾಜಕುಮಾರ ಬಿರಾದಾರ, ತಾನಾಜಿ ತೋರಣೇಕರ್, ಕಲ್ಲಪ್ಪ ಹುಗ್ಗಿ, ನಾಗಯ್ಯ ಸ್ವಾಮಿ, ಪ್ರಭುದಾಸ ಇತರರಿದ್ದರು.