ಜಿಲ್ಲೆ

ಬರ ಘೋಷಣೆಗೆ ಆಗ್ರಹ

ಕಲಬುರಗಿ: ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ, ಕೃಷಿಕರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅ.೨೧ರಂದು ಬೆಳಗ್ಗೆ ೧೧ರಿಂದ ನಗರದ ಗಂಜ್ ಹನುಮಾನ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಪಾಟೀಲ್ ಹೇಳಿದರು.

ರೈತಪರ, ಕನ್ನಡಪರ, ದಲಿತಪರ, ಹಿಂದೂಪರ, ಜನಪರ, ವ್ಯಾಪರಿಪರ ಸಂಘಟನೆಗಳಿAದ ಗುರುವಾರ ಏರ್ಪಡಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ ಬರ ಪರಿಸ್ಥಿತಿ ಎದುರಿಸುತ್ತಿದ್ದು, ರಾಜ್ಯದ ೨೩೯ ತಾಲೂಕುಗಳಲ್ಲಿ ಕೇವಲ ೧೬೧ ತಾಲೂಕುಗಳು ಮಾತ್ರ ಬರಪೀಡಿತ ತಾಲೂಕು ಎಂದು ಘೋಷಿಸಿ, ಅನ್ಯಾಯ ಮಾಡಲಾಗಿದೆ. ಅವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ, ಬರದ ಸಂಕಷ್ಟದಲ್ಲಿ ಸಿಲುಕಿರುವ ಹಲವು ತಾಲೂಕುಗಳ ರೈತರಿಗೆ ಅನ್ಯಾಯ ಮಾಡಿದ್ದು, ಕೂಡಲೇ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.

ಪ್ರತಿ ರೈತರಿಗೆ ಎಕರೆಗೆ ೨೫ ಸಾವಿರ ರೂ. ಸಹಾಯಧನ ನೀಡಬೇಕು, ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು. ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ನಾಲವಾರಕರ್, ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ಮಾದಿಗ ಸಮಾಜ ಅಧ್ಯಕ್ಷ ಚಂದ್ರಕಾಂತ ನಾಟೀಕರ್, ರೈತ ಸಂಘದ ಬಸವರಾಜ ಸಂಗೋಳಗಿ, ಹಿಂದೂಪರ ಸಂಘಟನೆಯ ಶಶಿಕಾಂತ ದೀಕ್ಷಿತ, ಮಲ್ಲಿಕಾರ್ಜುನ ಸಾರವಾಡ, ಸಚಿನ್ ಫರಹತಾಬಾದ್, ಲಕ್ಷ್ಮೀಕಾಂತ ಸ್ವಾದಿ ಇತರರಿದ್ದರು.