ಕ್ಯಾತನಬೀಡು ಪ್ರತಿಷ್ಠಾನ ಹೊನ್ನ ಬಿತ್ತೇವು ಹೊಲಕೆಲ್ಲಾಕಾರ್ಯಕ್ರಮದಡಿತಾಲೂಕಿನಚಿಕ್ಕಗೌಜಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ವರ್ತಮಾನದ ಕೃಷಿ ಬಿಕ್ಕಟ್ಟುಗಳ ಕುರಿತಚರ್ಚೆ ಮತ್ತು ಸಂವಾದಕಾರ್ಯಕ್ರಮ 
ಜಿಲ್ಲೆ

ಬಯಲು ಸೀಮೆಯ ರೈತರ ಬದುಕನ್ನು ಹಸನು ಮಾಡುವ

ಚಿಕ್ಕಮಗಳೂರು: ತಾಲೂಕಿನ ಅಂಬಳೆ, ಲಕ್ಯಾ, ಸಖರಾಯಪಟ್ಟಣ ಭಾಗಗಳು ಸೇರಿದಂತೆಜಿಲ್ಲೆಯ ಬಯಲು ಸೀಮೆಯ ರೈತರ ಬದುಕನ್ನು ಹಸನು ಮಾಡುವ ನಿಟ್ಟಿನಲ್ಲಿ ಆ ಭಾಗಕ್ಕೆ ಶಾಶ್ವತ ನೀರಾವರಿಯೋಜನೆಯನ್ನುರೂಪಿಸಬೇಕು ಎಂದು ಕೆ ಪಿ ಸಿ ಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಒತ್ತಾಯಿಸಿದರು.

ಕ್ಯಾತನಬೀಡು ಪ್ರತಿಷ್ಠಾನ ಹೊನ್ನ ಬಿತ್ತೇವು ಹೊಲಕೆಲ್ಲಾಕಾರ್ಯಕ್ರಮದಡಿತಾಲೂಕಿನಚಿಕ್ಕಗೌಜಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ವರ್ತಮಾನದ ಕೃಷಿ ಬಿಕ್ಕಟ್ಟುಗಳ ಕುರಿತಚರ್ಚೆ ಮತ್ತು ಸಂವಾದಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಜಿಲ್ಲೆಯ ಬಯಲು ಭಾಗ ಸದಾ ಮಳೆ ಕೊರತೆಯನ್ನುಎದುರಿಸುತ್ತದೆ, ಹಾಗಾಗಿ ಮಳೆಯನ್ನೇ ನಂಬಿ ಬದುಕುತ್ತಿರುವಅಲ್ಲಿನರೈತರು, ಕೃಷಿಕರು, ಬರಗಾಲದ ನೆರಳಿನಲ್ಲೆ÷್ಲÃ ಬದುಕುತ್ತಿದ್ದಾರೆ, ಮಳೆ ಇಲ್ಲದೇ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ, ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ, ಹಾಗಾಗಿ ಆ ಭಾಗಕ್ಕೆ ಶಾಶ್ವತ ನೀರಾವರಿಯೋಜನೆಯನ್ನುರೂಪಿಸಬೇಕು, ಆ ಮೂಲಕ ರೈತರ ಭೂಮಿಗೆ, ಮನೆಗಳಿಗೆ ನೀರು ನೀಡುವ ಕೆಲಸವನ್ನು ಮಾಡಬೇಕುಎಂದು ಆಗ್ರಹಿಸಿದರು.

ಬಯಲು ಭಾಗದರೈತರುತಮ್ಮ ಸಮಸ್ಯೆಗಳ ನಿವಾರಣೆ ಮತ್ತು ಹಕ್ಕಿಗಾಗಿ ಹೋರಾಟ ನಡೆಸಬೇಕುಎಂದು ಸಲಹೆ ಮಾಡಿದರು.

ರಾಜ್ಯರೈತ ಮೋರ್ಚಾ ಕಾರ್ಯದರ್ಶಿ ಕಲ್ಮರುಡಪ್ಪ ಮಾತನಾಡಿರೈತರ ಬದುಕು ಹಸನಾಗಬೇಕಾದರೆ ಸರ್ಕಾರ ಬೆಳೆ ನೀತಿ, ಬೆಲೆ ನೀತಿಜಾರಿಗೆತರಬೇಕು, ರೈತರ ಬೆಳೆಗಳಿಗೆ ಸರಿಯಾದ ಬೆಲೆ ನಿಗದಿಪಡಿಸಬೇಕುಎಂದು ಹೇಳಿದರು.

ಸದಾ ಬರಗಾಲದ ನೆರಳಿನಲ್ಲಿರುವ ಲಕ್ಯಾ ಭಾಗಕ್ಕೆ ನೀರಾವರಿಯೋಜನೆರೂಪಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರೈತ ಸಂಘದ ಮಾಜಿಜಿಲ್ಲಾಧ್ಯಕ್ಷಗುರುಶಾಂತಪ್ಪ ಭೂಮಿಯಲ್ಲಿನ ಫಲವತ್ತತೆಯನ್ನು ಹೆಚ್ಚಿಸುವುದರಜೊತೆಗೆ ಮುಂದಿನ ಪೀಳಿಗೆಗೆ ಕೃಷಿ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿರೈತರುರಾಸಾಯನಿಕಕೃಷಿಯನ್ನು ಬಿಟ್ಟು ಪರ್ಯಾಯಕೃಷಿಯತ್ತ ವಾಲಬೇಕು ಎಂದು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದಕ್ಯಾತನ ಬೀಡು ಪ್ರತಿಷ್ಠಾನದ ಕಾರ್ಯದರ್ಶಿ ರವೀಶ್‌ಕ್ಯಾತನಬೀಡು, ರೈತರು, ಕೃಷಿಕರ ಮನೆಮನೆಗೆ ತೆರಳಿ ಅವರ ಕಷ್ಟ ಸುಖ, ಸಮಸ್ಯೆಗಳನ್ನು ವಿಚಾರಿಸುವುದರಜೊತೆಗೆ ಅವುಗಳ ಬಗ್ಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನುಆಯೋಜಿಸಲಾಗಿದೆಎಂದು ತಿಳಿಸಿದರು.

ಕ್ಯಾತನ ಬಿಡು ಪ್ರತಿಷ್ಠಾನ ಕಳೆದ ೩೦ ವರ್ಷಗಳಿಂದ ನಿರಂತರವಾಗಿ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು, ರೈತಪರ, ಜನಪರ ಹೋರಾಟಗಳನ್ನು ನಡೆಸುತ್ತಾ ಬಂದಿದೆ, ಎಂದಅವರು ದಾಸರಹಳ್ಳಿ ಕೆರೆಯ ನೀರನ್ನು ಶುದ್ಧೀಕರಿಸಿ ಬಿಡಬೇಕು, ಕೆರೆಯನ್ನುಅಭಿವೃದ್ಧಿಪಡಿಸಬೇಕು, ಆ ನಿಟ್ಟಿನಲ್ಲಿ ಸ್ಥಳೀಯ ರೈತರು ಹೋರಾಟಕ್ಕೆ ಮುಂದಾಗಬೇಕುಎAದು ಹೇಳಿದರು.

ಕ್ಯಾತನಬೀಡು ಪ್ರತಿಷ್ಠಾನದಕಾರ್ಯಕ್ರಮ ಸಂಯೋಜಕ, ಸಾಹಿತಿ, ಡಿ.ಎಂ.ಮAಜುನಾಥ ಸ್ವಾಮಿ, ಪತ್ರಕರ್ತಎನ್.ರಾಜು, ರೈತ ಸಂಘದಜಿಲ್ಲಾಧ್ಯಕ್ಷ ಮಹೇಶ್, ಉದ್ಯಮಿ ಶ್ರೀನಿವಾಸ್, ಗ್ರಾಪಂ ಸದಸ್ಯ ಸುರೇಶ್, ಪಿಳ್ಳೇನಹಳ್ಳಿ ವಿಜಯಕುಮಾರ್, ಮುಖಂಡರಾದಚAದ್ರೇಗೌಡ, ನಾಗೇಗೌಡ, ಹಾಲಪ್ಪ, ಚಂದ್ರಮ್ಮ, ಚನ್ನೇಗೌಡ, ಪ್ರಗತಿಪರ ಕೃಷಿಕ ಮಾಸ್ತೇಗೌಡ, ಸಿ.ಎಚ್.ರವಿ ಜಾನಸಾಲೆ, ಅಹಿಂದಜಿಲ್ಲಾಧ್ಯಕ್ಷತ್ರಿಭುವನ್, ಲಿಂಗೇಗೌಡ, ಗಂಗಯ್ಯ, ದೇವೇಗೌಡ ಉಪಸ್ಥಿತರಿದ್ದರು.