ಜಿಲ್ಲೆ

ಬಯಲು ಶೌಚಮುಕ್ತ ಗ್ರಾಮಕ್ಕೆ ಶ್ರಮಿಸಲಿ

ಕುಲಗೋಡ: ಬಯಲು ಶೌಚದಿಂದ ಅನಾರೋಗ್ಯ, ಸಾವು ಮತ್ತು ಮುಜುಗರಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಪ್ರತಿ ಕುಟುಂಬವು ಶೌಚಗೃಹ ಹೊಂದಬೇಕು. ಆ ನಿಟ್ಟಿನಲ್ಲಿ ಮಕ್ಕಳು ಪಾಲಕರಿಗೆ ಆರೋಗ್ಯ ಸಂರಕ್ಷಣೆಯ ಜಾಗೃತಿ ಮೂಡಿಸಬೇಕು ಎಂದು ಗ್ರಾಪಂ ಅಧ್ಯಕ್ಷ ತಮ್ಮಣ್ಣ ದೇವರ ಹೇಳಿದರು.

ಗ್ರಾಮದಲ್ಲಿ ಗ್ರಾಪಂ ಹಾಗೂ ಸಾಯಿ ರತ್ನ ೌಂಡೇಷನ್ ಆಶ್ರಯದಲ್ಲಿ ವಿಶ್ವ ಶೌಚಗೃಹ ದಿನಾಚರಣೆ ಅಂಗವಾಗಿ ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆ ವಿಜೇತರ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಯಲು ಶೌಚಮುಕ್ತ ಗ್ರಾಮ ಮಾಡಲು ಗ್ರಾಪಂ ಸದಸ್ಯರು, ಅಧಿಕಾರಿಗಳು ಅಭಿಯಾನ ಕೈಗೊಂಡಿದ್ದಾರೆ. ಶೌಚಗೃಹ

ಬಳಕೆ ಜಾಗೃತಿ ಮೂಡಿಸಲು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

ಬಹುಮಾನ ವಿಜೇತರು: ಪ್ರಾಥಮಿಕ ಶಾಲಾ ವಿಭಾಗದಲ್ಲಿ ಭಾಗ್ಯಶ್ರೀ ಕಳ್ಳೇಪ್ಪನವರ ಪ್ರಥಮ , ದ್ವಿತೀಯ ಸೃಷ್ಟಿ ಹಾದಿಮನಿ, ತೃತೀಯ ಸ್ಥಾನವನ್ನು ಸೌಜನ್ಯ ಮಾಳಿ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ವಿನಾಯಕ ಭೂಸರಡ್ಡಿ ಪ್ರಥಮ ಗಣೇಶ ಟವಳಿ ದ್ವಿತೀಯ, ತೃತೀಯ ಸೃಷ್ಟಿ ಅಮ್ಮಣಗಿ ತೃತೀಯ ಸ್ಥಾನದೊಂದಿಗೆ ನಗದು ಬಹುಮಾನ ಮತ್ತು ಪ್ರಶಸ್ತಿಪತ್ರ ಪಡೆದರು.

ಮುಖಂಡರಾದ ಬಸನಗೌಡ ಪಾಟೀಲ, ಸುಭಾಸ ವಂಟಗೋಡಿ, ಪಿಡಿಒ ಸದಾಶಿವ ದೇವರ, ಸಾಯಿರತ್ನ ೌಂಡೇಷನ್ ಅಧ್ಯಕ್ಷ ಶಂಕರ ಹಾದಿಮನಿ, ಶ್ರೀಪತಿ ಗಣಿ, ನಾಗೇಶ ಬಂಡಿವಡ್ಡರ, ಸುರೇಶ ತಳವಾರ, ಎಂ.ಆರ್. ಕುಲಕರ್ಣಿ, ಬಸವರಾಜ ಕೋಟಿ, ಶ್ರೀಶೈಲ ಹುಚ್ಚನ್ನವರ, ಗಿರೀಶ ಯಕ್ಸಂಬಿ, ಬಿ.ಎ. ಬಂಗಾರಿ, ಕಿರಣ ಗಂಗನ್ನವರ ಇತರರು ಇದ್ದರು.