ಕಲಬುರಗಿ: ಶ್ರಾವಣ ನಿಮಿತ್ತ ಭವಾನಿ ನಗರದ ಶ್ರೀಗುರು ಚನ್ನವೀರೇಶ್ವರ ಮಠದಲ್ಲಿ ಶ್ರೀ ಚನ್ನವೀರ ಶಿವಯೋಗಿಗಳ ಪುರಾಣ ಮಹಾಮಂಗಲೋತ್ಸವ, ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಸೋಮವಾರ ನೆರವೇರಿತು.
ಮಠದ ಪೀಠಾಧಿಪತಿ ಶ್ರೀ ಗುರುಪಾದಲಿಂಗ ಶಿವಯೋಗಿಳ ನೇತೃತ್ವದಲ್ಲಿ ಬೆಳಗ್ಗೆ ಶ್ರೀ ಚನ್ನವೀರ ಶಿವಯೋಗಿಗಳ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರುತಿ ನಂತರ ಷಟಸ್ಥಲ ಧ್ವಜಾರೋಹಣ ನೆರವೇರಿಸಲಾಯಿತು.
ಪಲ್ಲಕ್ಕಿಯಲ್ಲಿ ಶ್ರೀ ಚನ್ನವೀರ ಶಿವಯೋಗಿಗಳ ಭಾವಚಿತ್ರ ಇಟ್ಟ ನಂತರ ಉತ್ಸವಕ್ಕೆ ಚಾಲನೆ ದೊರೆಯಿತು. ಶ್ರೀಮಠದಿಂದ ಪ್ರಾರಂಭವಾಗಿ ರಾಮನಗರ ಕ್ರಾಸ್, ಭವಾನಿನಗರ, ಪೂಜಾರಿ ಮಠದ ವೃತ್ತ, ಕಾಕಡೆ ಚೌಕ್ ಮಾರ್ಗವಾಗಿ ಸಂಜೆ ಮಠಕ್ಕೆ ತಲುಪಿತು. ನಂತರ ಪೂಜಾ ಕೈಂಕರ್ಯ, ಮಹಾಮಂಗಳಾರುತಿಯೊAದಿಗೆ ಪುರಾಣ ಸಂಪನ್ನವಾಯಿತು.
ಪುರಾಣದಲ್ಲಿ ಸೇವೆ ಸಲ್ಲಿಸಿದ ಭಕ್ತರು ಹಾಗೂ ಪುರಾಣಿಕ ಶಿವಬಸಯ್ಯ ಶಾಸಿ, ಗವಾಯಿ ಶಿವಲಿಂಗಯ್ಯ, ತಬಲಾವಾದಕ ಮಲ್ಲಿಕಾರ್ಜುನ ವರನಾಳ ಅವರನ್ನು ಶ್ರೀ ಗುರುಪಾದಲಿಂಗ ಶಿವಯೋಗಿಗಳು ಸನ್ಮಾನಿಸಿದರು. ಭಕ್ತರಿಂದ ಶ್ರೀಗಳ ತುಲಾಭಾರ ನೆರವೇರಿತು.
ಮಕ್ತಂಪುರ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಬಸಪ್ಪ ಪಾಟೀಲ್ ಅಷ್ಟಗಿ, ಪಾಲಿಕೆ ಸದಸ್ಯೆ ಗಂಗಮ್ಮ ಮುನ್ನೊಳ್ಳಿ, ಬಸವರಾಜ ಮುನ್ನೋಳ್ಳಿ, ಶಾಂತು ದುಧನಿ, ಬಸವರಾಜ ಮುಚ್ಚಟ್ಟಿ, ಸುಖದೇವ ಪೂಜಾರಿ, ಸಂತೋಷ ಸಂಗೋಳ್ಳಿ, ರವಿ ಮಹಾಗಾಂವ, ಮಾಣಿಕರಾವ ಮಿರಕಲ್, ವಿಠ್ಠಲರಾವ ಗೋಗಿ, ಶಿವಶರಣಪ್ಪ ಗೋಗಿ, ಸಿದ್ದು ಸಂಗೋಳಗಿ, ಶಿವಶರಣಯ್ಯ ಸ್ವಾಮಿ ಕೊಟ್ಟರಗಿ, ವಿನೋದ ಕೊರೇಜಿ, ಚಂದ್ರಕಾAತ ಹಸರಗುಂಡಗಿ, ಸಂಗನಗೌಡ ಪಾಟೀಲ್, ರೇವಣಸಿದ್ದಯ್ಯ ಶಾಸಿ, ರಾಜು ರೆಡ್ಡಿ, ಶರಣಪ್ಪ ರಾವೂರು, ಶಿವರಾಜ ಬಾಳಖೇಡ, ಸಿದ್ದು ತಾಳಮಡಗಿ, ಶರಣು ವರನಾಳ, ಸುನಿಲ ಪೂಜಾರಿ, ಬಸವರಾಜ ಬುಕ್ಕಾ, ರಾಜು ಜಾಬಶೆಟ್ಟಿ, ಚನ್ನವೀರ ಹಿರೇಮಠ ಇತರರಿದ್ದರು.